ಹಸುವಿನ ಕೊಟ್ಟಿಗೆ ಯಾವ ದಿಕ್ಕಿನಲ್ಲಿ ನಿರ್ಮಿಸಿದರೆ ಉತ್ತಮ …?
ಮಂಗಳವಾರ, 10 ಏಪ್ರಿಲ್ 2018 (06:58 IST)
ಬೆಂಗಳೂರು : ಹಳ್ಳಿಕಡೆ ಹೆಚ್ಚಿನವರು ತಮ್ಮ ಮನೆಯಲ್ಲಿ ಹಸುಗಳನ್ನು ಸಾಕುತ್ತಾರೆ. ಅದರ ಹಾಲಿನಿಂದಲ್ಲೇ ಜೀವನ ಸಾಗಿಸುವವರು ಎಷ್ಟೋ ಮಂದಿ ಇದ್ದಾರೆ. ಮನೆಯ ಹೊರಗೆ ಅವುಗಳನ್ನು ಸಾಕಲು ಕೊಟ್ಟಿಗೆನ್ನು ನಿರ್ಮಿಸುತ್ತಾರೆ.ಆದರೆ ಈ ಕೊಟ್ಟಿಗೆ ಸರಿಯಾದ ಸ್ಥಳದಲ್ಲಿ ನಿರ್ಮಿಸಿದರೆ ಮಾತ್ರ ಆ ವೃತ್ತಿಯಲ್ಲಿ ಅಭಿವೃದ್ಧಿಯನ್ನು ಹೊಂದಲು ಸಾಧ್ಯ.
ಹಸುಗಳನ್ನು ನಿರ್ದಿಷ್ಟವಾದ ಸ್ಥಳದಲ್ಲಿ ಕಟ್ಟಿ ಹಾಲು, ಹೈನು ಇತ್ಯಾದಿಗಳಿಗಾಗಿ ಪ್ರತ್ಯೇಕ ಕೊಟ್ಟಿಗೆಗಳನ್ನು ನಿರ್ಮಿಸಿ, ಸ್ವಚ್ಚವಾದ ಸ್ಥಳಾವಕಾಶ ರೂಪಿಸಿದರೆ ಅದು ಒಳ್ಳೆಯದೇ ಆಗಿದೆ. ಆದರೆ ಈ ಕೊಟ್ಟಿಗೆಗಳನ್ನು ದಕ್ಷಿಣ ದಿಕ್ಕಿನಲ್ಲಿ ಮಾತ್ರ ಕಟ್ಟಬಾರದು. ಒಂದು ವೇಳೆ ಕಟ್ಟಿದರೆ ಅದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ