ಒಟಿಟಿಗೆ ಭರ್ಜರಿ ಮೊತ್ತಕ್ಕೆ ಸೇಲ್ ಆದ ಶಾರುಖ್ ಖಾನ್ ಜವಾನ್ ಸಿನಿಮಾ

ಶನಿವಾರ, 2 ಜುಲೈ 2022 (09:20 IST)
ಮುಂಬೈ: ಶಾರುಖ್ ಖಾನ್ ಬಹಳ ಸಮಯದ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಜವಾನ್ ಸಿನಿಮಾಗೆ ಈಗ ಒಟಿಟಿಯಲ್ಲಿ ಭರ್ಜರಿ ಬೇಡಿಕೆ ಬಂದಿದೆ.

ಈ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದಿತ್ತು. ಈ ಸಿನಿಮಾದಲ್ಲಿ ಶಾರುಖ್ ಗೆ ನಾಯಕಿಯಾಗಿ ನಯನತಾರಾ ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ ಚಿತ್ರ ಶೂಟಿಂಗ್ ಹಂತದಲ್ಲಿದೆಯಷ್ಟೇ.

ಆದರೆ ಅಟ್ಲೀ ನಿರ್ದೇಶನದ ಈ ಸಿನಿಮಾವನ್ನು ಈಗಾಗಲೇ ಒಟಿಟಿ ದೈತ್ಯ ನೆಟ್ ಫ್ಲಿಕ್ಸ್ ಬರೋಬ್ಬರಿ 120 ಕೋಟಿ ರೂ.ಗೆ ಖರೀದಿ ಮಾಡಿದೆ ಎಂದು ವರದಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ