ದುಬಾರಿ ವಾಚ್ ನಿಂದಾಗಿ ಏರ್ ಪೋರ್ಟ್ ನಲ್ಲಿ ಸಿಕ್ಕಿಬಿದ್ದ ಶಾರುಖ್ ಖಾನ್

ಭಾನುವಾರ, 13 ನವೆಂಬರ್ 2022 (09:28 IST)
ಮುಂಬೈ: ದುಬೈನಲ್ಲಿ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ತೆರಳಿ ವಾಪಸಾಗುವಾಗ ಬಾಲಿವುಡ್ ನಟ ಶಾರುಖ್ ಖಾನ್ ಮುಂಬೈ ವಿಮಾನ ನಿಲ್ದಾಣದಲ್ಲಿ ಸುಂಕಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಶಾರುಖ್ ಬ್ಯಾಗ್ ಪರಿಶೀಲನೆ ವೇಳೆ ಆರು ದುಬಾರಿ ವಾಚ್ ಸಿಕ್ಕಿತ್ತು. ಈ ರೀತಿ ವಿದೇಶದಿಂದ ದುಬಾರಿ ವಾಚ್ ತರುವಾಗ ಅದಕ್ಕೆ ಸೂಕ್ತ ಸುಂಕ ಪಾವತಿಸಬೇಕು.

ಸುಮಾರು 18 ಲಕ್ಷ ರೂ.ಗಳ ವಾಚ್ ಗಳು ಇದಾಗಿದ್ದು 6 ಲಕ್ಷದಷ್ಟು ಸುಂಕ ಪಾವತಿಸಬೇಕಿತ್ತು. ಈ ಸಂಬಂಧ ಶಾರುಖ್ ಹಾಗೂ ಅವರ ಮ್ಯಾನೇಜರ್ ಕೆಲವು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ವಿಮಾನ ನಿಲ್ದಾಣದಿಂದ ತೆರಳಲು ಅನುಮತಿ ನೀಡಲಾಯಿತು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ