ಟಿ20 ವಿಶ್ವಕಪ್ ಬಳಿಕ ಕೆಎಲ್ ರಾಹುಲ್ ಬಾಳಿನಲ್ಲಿ ನಡೆಯಲಿದೆ ಮತ್ತೊಂದು ವಿಶೇಷ!

ಬುಧವಾರ, 9 ನವೆಂಬರ್ 2022 (08:20 IST)
ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಕೆಎಲ್ ರಾಹುಲ್ ಈಗ ಮೋಸ್ಟ್ ವಾಂಟೆಡ್ ಬ್ಯಾಚುಲರ್ ಗಳಲ್ಲೊಬ್ಬರು. ಆದರೆ ಕಮಿಟೆಡ್ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ.

ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಜೊತೆ ರಾಹುಲ್ ಡೇಟಿಂಗ್ ಮಾಡುತ್ತಿರುವುದು ಗುಟ್ಟಾಗೇನು ಉಳಿದಿಲ್ಲ. ಇವರಿಬ್ಬರ ಮದುವೆ ಬಗ್ಗೆ ಆಗಾಗ ರೂಮರ್ ಗಳು ಕೇಳಿಬರುತ್ತಲೇ ಇರುತ್ತವೆ. ಈಗ ಹೊಸದೊಂದು ಮಾತು ಕೇಳಿಬಂದಿದೆ.

ರಾಹುಲ್ ಮತ್ತು ಅಥಿಯಾ ಕೊನೆಗೂ ಮದುವೆಯಾಗಲು ತೀರ್ಮಾನಿಸಿದ್ದು, ಟಿ20 ವಿಶ್ವಕಪ್ ಬಳಿಕ ಆ ಗಳಿಗೆ ಕೂಡಿಬರಲಿದೆ ಎಂಬ ಸುದ್ದಿಯಿದೆ. ಇದಕ್ಕೂ ಮೊದಲು ಸುನಿಲ್ ಶೆಟ್ಟಿ ಇವರಿಬ್ಬರ ಮದುವೆ ಬಗ್ಗೆ ಕೇಳಿದ ಪ್ರಶ್ನೆಗೆ ರಾಹುಲ್ ಕ್ರಿಕೆಟ್ ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಮದುವೆಗೆ ಸಮಯ ಸಿಕ್ಕಿಲ್ಲ ಎಂದಿದ್ದರು. ಈಗ ವಿಶ್ವಕಪ್ ನಂತಹ ಮಹತ್ವದ ಟೂರ್ನಿ ಮುಗಿದ ಬಳಿಕ ರಾಹುಲ್-ಅಥಿಯಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರಂತೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ