ಗಂಡ ಏನ್ಮಾಡ್ತಾನೆ ಎಂದು ನೋಡುವ ಪುರುಸೊತ್ತು ನನಗಿರಲಿಲ್ಲ: ಶಿಲ್ಪಾ ಶೆಟ್ಟಿ
ಗುರುವಾರ, 16 ಸೆಪ್ಟಂಬರ್ 2021 (16:44 IST)
ಮುಂಬೈ: ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಬಂಧಿತರಾಗಿರುವ ಉದ್ಯಮಿ ರಾಜ್ ಕುಂದ್ರಾ ಬಗ್ಗೆ ಪತ್ನಿ, ನಟಿ ಶಿಲ್ಪಾ ಶೆಟ್ಟಿ ಪೊಲೀಸರಿಗೆ ನೀಡಿರುವ ಹೇಳಿಕೆ ಬಹಿರಂಗವಾಗಿದೆ.
ಇದೇ ಮೊದಲ ಬಾರಿಗೆ ರಾಜ್ ಕುಂದ್ರಾ ಬಂಧನದ ಕುರಿತು ಬಿಚ್ಚು ಮನಸ್ಸಿನಿಂದ ಮಾತನಾಡಿರುವ ಶಿಲ್ಪಾ, ನಾನು ನನ್ನ ಕೆಲಸಗಳಲ್ಲಿ ಬ್ಯುಸಿಯಾಗಿದ್ದೆ. ರಾಜ್ ಕುಂದ್ರಾ ಏನು ಮಾಡುತ್ತಿದ್ದರು ಎಂದು ನೋಡಲೂ ನನಗೆ ಪುರುಸೊತ್ತಿರಲಿಲ್ಲ ಎಂದಿದ್ದಾರೆ.
ಕ್ರೈಂ ಬ್ರ್ಯಾಂಚ್ ವಿಚಾರಣೆ ವೇಳೆ ಶಿಲ್ಪಾ ನೀಡಿದ ಹೇಳಿಕೆ ಬಹಿರಂಗವಾಗಿದೆ. ಅದರಲ್ಲಿ ಶಿಲ್ಪಾ ಅಧಿಕಾರಿಗಳ ಮುಂದೆ, ವಿಯಾನ್ ಇಂಡಸ್ಟ್ರೀಸ್ ಮುಖಾಂತರ ಹಾಟ್ ಶಾಟ್ ಆಪ್ ಕ್ರಿಯೇಟ್ ಆಗಿದ್ದು, ಅದರಲ್ಲಿ ಪೋರ್ನ್ ವಿಡಿಯೋಗಳನ್ನು ನಿರ್ಮಿಸಲಾಗುತ್ತಿದೆ ಎಂದು ಗೊತ್ತಾಗಿದ್ದೇ ನನಗೆ ಈಗ. ನಾನು ನನ್ನದೇ ಕೆಲಸಗಳಲ್ಲಿ ಬ್ಯುಸಿಯಿದ್ದೆ. ನನ್ನ ಗಂಡ ಏನು ಮಾಡುತ್ತಿದ್ದ ಎಂಬುದು ನನಗೆ ಗೊತ್ತಿರಲಿಲ್ಲ. ಆತ ನನಗೆ ಹೇಳುತ್ತಲೂ ಇರಲಿಲ್ಲ. ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ ಎಂದಿದ್ದಾರೆ. ಅಲ್ಲದೆ ನನಗೆ ಬಾಲೀಫೇಮ್ ಎಂಬ ಆಪ್ ಬಗ್ಗೆಯೂ ಗೊತ್ತಿಲ್ಲ ಎಂದಿದ್ದಾರೆ. ಇದಕ್ಕೂ ಮೊದಲು ಫೆಬ್ರವರಿಯಲ್ಲಿ ವಿಯಾನ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದ ಉಮೇಶ್ ಕಾಮತ್ ನನ್ನು ಪೋರ್ನ್ ವಿಡಿಯೋಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದಾಗ ಗಂಡನ ಬಳಿಕ ಆ ಬಗ್ಗೆ ಕೇಳಿದ್ದೆ. ಆದರೆ ರಾಜ್ ಕುಂದ್ರಾ ಆಗ ಉಮೇಶ್ ಪ್ರತ್ಯೇಕವಾಗಿ ಪೋರ್ನ್ ವಿಡಿಯೋಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಎಂದಿದ್ದರು ಎಂದಿದ್ದಾರೆ.