ಬೆಳ್ಳಿತೆರೆಯ ಈ ಸೌಂದರ್ಯರಾಶಿಗೆ 50 ವರ್ಷ

ಶುಕ್ರವಾರ, 23 ಡಿಸೆಂಬರ್ 2016 (14:43 IST)
ಬೆಳ್ಳಿತೆರೆಯ ಮೇಲೆ ಐವತ್ತು ವರ್ಷ ಪೂರೈಸುವುದೆಂದರೆ ಯಾವ ಕಲಾವಿದನಿಗಾದರೂ ಒಂದು ಅಪರೂಪದ ಮೈಲುಗಲ್ಲು. ಅದೆಷ್ಟೋ ತಾರೆಗಳು ನಾಲ್ಕೈದು ವರ್ಷಕ್ಕೆಲ್ಲಾ ನಿವೃತ್ತರಾಗುವುದನ್ನು ನೋಡಿದ್ದೇವೆ. ಅಂತಹದ್ದಲ್ಲಿ ಐವತ್ತು ಪೂರೈಸುವುದೆಂದರೆ ಸಾಮಾನ್ಯದ ಮಾತಲ್ಲ.
 
ಆ ರೀತಿಯ ಅಪರೂಪದ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ ಅಂದಗಾತಿ ಶ್ರೀದೇವಿ. ತನ್ನ ನಾಲ್ಕನೇ ವರ್ಷಕ್ಕೆ ಬಣ್ಣ ಹಚ್ಚಿದ ಈ ಬೆಡಗಿ ಹೊಸ ವರ್ಷದ ಸಂಭ್ರಮದಲ್ಲಿ ಸುವರ್ಣೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಅಷ್ಟು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸುವುದೆಂದರೆ ನಿಜಕ್ಕೂ ಚಾಲೆಂಜಿಂಗ್.
 
1967ರಲ್ಲಿ ಕಾಂಧಾನ್ ಕರುಣಾಯ್ ಎಂಬ ತಮಿಳು ಚಿತ್ರದ ಮೂಲಕ ಬೆಳ್ಳಿತೆರೆಗೆ ಅಂಬೆಗಾಲಿಕ್ಕಿದ ಶ್ರೀದೇವಿ, ನಾಲ್ಕರ ಹರೆಯದಲ್ಲಿ ಕುಮಾರಸ್ವಾಮಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮೊದಲ ಚಿತ್ರದಲ್ಲೇ ಶಿವಾಜಿ ಗಣೇಶನ್, ಜಯಲಲಿತಾ, ಕೆಆರ್ ವಿಜಯಾರಂತಹ ದಿಗ್ಗರ ಜೊತೆ ಅಭಿನಯಿಸಿರುವುದು ಅವರ ಹೆಚ್ಚುಗಾರಿಗೆ. ಸದ್ಯಕ್ಕೆ ಮಾಮ್ ಚಿತ್ರದಲ್ಲಿ ಅಭಿನಯಿಸುತಿದ್ದು 2017ರ  ಸುವರ್ಣೋತ್ಸವಕ್ಕೆ ಆ ಚಿತ್ರ ತೆರೆಗೆ ಬರಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ