Darshan: ದೇಶದಲ್ಲಿ ಆಯ್ತು, ಈಗ ವಿದೇಶಕ್ಕೆ ಅನುಮತಿ ಕೊಡಿ ಎಂದು ಕೋರ್ಟ್ ಮೆಟ್ಟಿಲೇರಿದ ದರ್ಶನ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ರೆಗ್ಯುಲರ್ ಜಾಮೀನು ಪಡೆದು ಹೊರಬಂದಿದ್ದಾರೆ. ಇದನ್ನು ಪ್ರಶ್ನಿಸಿ ತನಿಖಾಧಿಕಾರಿಗಳು ಸಲ್ಲಿಸಿದ್ದ ಮೇಲ್ಮನವಿ ಈಗಲೂ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಯ ಹಂತದಲ್ಲಿದೆ.
ಈ ನಡುವೆ ದರ್ಶನ್ ಶೂಟಿಂಗ್ ನಿಮಿತ್ತ ರಾಜಸ್ಥಾನ್ ವರೆಗೂ ಹೋಗಿಬಂದಿದ್ದರು. ಇದಕ್ಕೆ ಕೋರ್ಟ್ ಅನುಮತಿಯನ್ನೂ ಪಡೆದುಕೊಂಡಿದ್ದರು. ಇದೀಗ ವಿದೇಶಕ್ಕೆ ಹೋಗಲು ಅನುಮತಿ ಕೊಡಿ ಎಂದು ಕೋರ್ಟ್ ಕದ ಬಡಿದಿದ್ದಾರೆ.
ಡೆವಿಲ್ ಸಿನಿಮಾ ಶೂಟಿಂಗ್ ಗಾಗಿ ಯುರೋಪ್ ಮತ್ತು ದುಬೈಗೆ ಹೋಗಬೇಕಿದೆ. ಜೂನ್ 1 ರಿಂದ 25 ರವರೆಗೆ ಹೋಗಲು ಅವಕಾಶ ಕೊಡಿ ಎಂದು ದರ್ಶನ್ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ. ಆದರೆ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಪ್ರಮುಖ ಮತ್ತು ಪ್ರಭಾವೀ ಆರೋಪಿ. ಅವರನ್ನು ವಿದೇಶಕ್ಕೆ ತೆರಳಲು ಬಿಟ್ಟರೆ ವಾಪಸ್ ಬರಲ್ಲ. ಹೀಗಾಗಿ ಅವಕಾಶ ಕೊಡಬಾರದು ಎಂದು ವಿಶೇಷ ಅಭಿಯೋಜಕ ಪ್ರಸನ್ನಕುಮಾರ್ ಪ್ರತಿ ಅರ್ಜಿ ಸಲ್ಲಿಸಿದ್ದಾರೆ.