ಬೆಂಗಳೂರು: ಥಗ್ಸ್ ಆಫ್ ಲೈಫ್ ಈವೆಂಟ್ ನಲ್ಲಿ ಕನ್ನಡಕ್ಕೆ ಅಪಮಾನ ಮಾಡಿದ ತಮಿಳು ನಟ ಕಮಲ್ ಹಾಸನ್ ಗೆ ವೇದಿಕೆಯಲ್ಲೇ ಇದ್ದ ಶಿವರಾಜ್ ಕುಮಾರ್ ಅಲ್ಲಿಯೇ ಚಳಿ ಬಿಡಿಸಬೇಕಿತ್ತು ಎಂದು ಕನ್ನಡಿಗರು ಅಭಿಪ್ರಾಯ ಪಟ್ಟಿದ್ದಾರೆ.
ಥಗ್ಸ್ ಆಫ್ ಲೈಫ್ ಈವೆಂಟ್ ನಲ್ಲಿ ಶಿವರಾಜ್ ಕುಮಾರ್ ಎದುರೇ ಕಮಲ್ ಹಾಸನ್ ಕನ್ನಡ ಭಾಷೆ ಹುಟ್ಟಿದ್ದೇ ತಮಿಳಿನಿಂದ ಎಂದಿದ್ದರು. ಅವರ ಈ ಹೇಳಿಕೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಕಮಲ್ ಹಾಸನ್ ಕ್ಷಮೆ ಕೇಳಬೇಕು, ಅವರ ಸಿನಿಮಾಗಳನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹ ಕೇಳಿಬಂದಿದೆ.
ಕಮಲ್ ಹೇಳುವುದನ್ನು ಕೇಳಿಸಿಕೊಂಡು ಶಿವಣ್ಣ ಸುಮ್ಮನೇ ಕೂತಿದ್ದು ಯಾಕೆ? ವೇದಿಕೆಯಲ್ಲೇ ಚಳಿ ಬಿಡಿಸಬೇಕಿತ್ತು. ಇವರಿಗೆ ಬೆಳೆಯಲು ಕನ್ನಡಿಗರು ಬೇಕು, ಕುಡಿಯಲು ನಮ್ಮ ಕಾವೇರಿ ನೀರು ಬೇಕು, ಉದ್ಯೋಗಕ್ಕೆ ನಮ್ಮ ಬೆಂಗಳೂರು ಬೇಕು ಈಗ ಕನ್ನಡವನ್ನೇ ಅಪಮಾನ ಮಾಡುವಷ್ಟು ಸೊಕ್ಕು ತೋರುತ್ತಾರೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.