ಬೆಂಗಳೂರು: ಕಮಲ್ ಹಾಸನ್ ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಈಗ ಅವರನ್ನು ಅಪ್ಪಿಕೊಂಡ ಬಳಿಕ ಮೂರು ದಿನ ಸ್ನಾನ ಮಾಡಿರಲಿಲ್ಲ ಎಂಬ ಶಿವರಾಜ್ ಕುಮಾರ್ ಅವರ ವಿಡಿಯೋವೊಂದು ವೈರಲ್ ಆಗಿದೆ.
ಕಮಲ್ ಹಾಸನ್ ಅಭಿನಯದ ಥಗ್ಸ್ ಆಫ್ ಲೈಫ್ ಸಿನಿಮಾದ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಕೂಡಾ ಅತಿಥಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ಶಿವಣ್ಣ ಎದುರಿನಲ್ಲೇ ಕಮಲ್ ಹಾಸನ್, ಕನ್ನಡ ಭಾಷೆ ತಮಿಳಿನಿಂದ ಹುಟ್ಟಿಕೊಂಡಿದೆ ಎಂದಿದ್ದರು. ಇದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಕನ್ನಡ ಪರ ಸಂಘಟನೆಗಳು ಕಮಲ್ ಹಾಸನ್ ಪರ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕಮಲ್ ಸಿನಿಮಾ ಬಿಡುಗಡೆಗೆ ನಿರ್ಬಂಧ ವಿಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದರ ನಡುವೆ ಇದೇ ಕಾರ್ಯಕ್ರಮದಲ್ಲಿ ಶಿವಣ್ಣ ಮಾತನಾಡಿದ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಶಿವಣ್ಣ ತಮಗೆ ಕಮಲ್ ಮೇಲಿರುವ ಅಭಿಮಾನ ಎಂಥದ್ದು ಎಂದು ಹೇಳಿಕೊಳ್ಳುತ್ತಾರೆ. ಮೊದಲ ಬಾರಿಗೆ ಕಮಲ್ ಹಾಸನ್ ಭೇಟಿಯಾಗಿ ಅಪ್ಪಿಕೊಂಡಾಗ ನಾನು ಮೂರು ದಿನ ಸ್ನಾನ ಮಾಡಿರಲಿಲ್ಲ. ಅವರ ಅಪ್ಪುಗೆಯ ವಾಸನೆ ಹಾಗೇ ಇರಲಿ ಎಂಬ ಕಾರಣಕ್ಕೆ. ಕಮಲ್ ಗೆ ನಾನು ಅಷ್ಟು ದೊಡ್ಡ ಅಭಿಮಾನಿ ಎಂದಿದ್ದರು. ಅವರ ಈ ವಿಡಿಯೋ ಈಗ ವೈರಲ್ ಆಗಿದೆ.
How Rajinikanth is for Tamil
How Chiranjeevi is for Telugu
Shivanna you r same for Kannada????❤️
Just please stop this I request ????
This guy Kamal hasan can come to Bengaluru for Vikram movie promotion but couldn't attend Appu's Gandhadagudi Eventpic.twitter.com/E3TjbAhzi2