ಕೊನೆಯ ಬಾರಿಗೆ ತನ್ನ ನೆಚ್ಚಿನ ಕಾಂಚಿವರಾಮ್ ಸೀರೆಯನ್ನು ಧರಿಸಿದ ಶ್ರೀದೇವಿ

ಅತಿಥಾ

ಬುಧವಾರ, 28 ಫೆಬ್ರವರಿ 2018 (16:14 IST)
ಬೈನ ಲೋಖಂಡ್ವಾಲಾದ ಸೆಲೆಬ್ರೇಷನ್ ಸ್ಪೋರ್ಟ್ಸ್ ಕ್ಲಬ್‍ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಟಿ ಐಶ್ವರ್ಯಾ ರೈ ಬಚ್ಚನ್, ಜಯಾ ಬಚ್ಚನ್, ಜಯಪ್ರದಾ, ತಬು, ಸುಶ್ಮಿತಾ ಸೇನ್, ಮಾಧುರಿ ದೀಕ್ಷಿತ್, ಸೋನಂ ಕಪೂರ್, ಕಾಜೋಲ್, ಅಜಯ್ ದೇವಗನ್ ಮುಂತಾದ ಬಾಲಿವುಡ್ ನಟ, ನಟಿಯರು ಸೇರಿದಂತೆ ಇತರೆ ಗಣ್ಯರು ಹಾಗೂ ಅಭಿಮಾನಿಗಳು ಶ್ರೀದೇವಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಶ್ರೀದೇವಿಯವರ ಪಾರ್ಥಿವ ಶರೀರವನ್ನು ಕೆಂಪು ಮತ್ತು ಚಿನ್ನದ ಬಣ್ಣದ ಕಾಂಚಿವರಾಮ್ ಸೀರೆಯಲ್ಲಿ ಸುತ್ತುವರಿಸಿ, ತಾಳಿ, ಹಾಗು ಚಿನ್ನದ ಆಭರಣಗಳಿಂದ ಅಲಂಕರಿಸಿ, ಗಾಜಿನ ಕ್ಯಾಸ್ಕೇಡ್‌ನಲ್ಲಿ ಇರಿಸಲಾಗಿತ್ತು.
 
ಮಧ್ಯಾಹ್ನ 2ಕ್ಕೆ ಪಾರ್ಥಿವ ಶರೀರದ ಅಂತಿಮ ಯಾತ್ರೆ ಪ್ರಾರಂಭವಾಗಿದ್ದು, ಮಧ್ಯಾಹ್ನ ಶ್ರೀದೇವಿ ಅವರ ಅಂತ್ಯಸಂಸ್ಕಾರವು ವಿಲೆಪಾರ್ಲೆ ಸೇವಾಸಮಾಜ ಚಿತಾಗಾರದಲ್ಲಿ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ