ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ನಟ ಕಮಲ್ ಹಾಸನ್

ಶುಕ್ರವಾರ, 22 ಜೂನ್ 2018 (08:42 IST)
ಚೆನ್ನೈ : ದೆಹಲಿಗೆ ತೆರಳಿ ಚುನಾವಣಾ ಆಯೋಗದಲ್ಲಿ ತಮ್ಮ ಹೊಸ 'ಮಕ್ಕಳ ನಿಧಿ ಪಕ್ಷ' ವನ್ನು ರಿಜಿಸ್ಟರ್ ಮಾಡಿಸಿದ  ತಮಿಳು ಚಿತ್ರರಂಗದ ಸ್ಟಾರ್ ನಟ ಕಮಲ್ ಹಾಸನ್ ಅವರು ನಂತರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿಯಾಗಿರುವುದಾಗಿ ತಿಳಿದುಬಂದಿದೆ.


ಸುಮಾರು ೪೫ ನಿಮಿಷಗಳ ಕಾಲ ರಾಹುಲ್ ಗಾಂಧಿ ಅವರ ಜೊತೆ ಮಾತುಕತೆ ನಡೆಸಿದ ನಟ ಕಮಲ್ ಹಾಸನ್ ಅವರು ತಮಿಳುನಾಡಿನ ಸದ್ಯದ ಪರಿಸ್ಥಿತಿ ಮತ್ತು ರಾಜಕೀಯ ಚಿತ್ರಣದ ಬಗ್ಗೆ ಚರ್ಚಿಸಿರುವುದಾಗಿ ಹೇಳಿದ್ದಾರೆ. ಭೇಟಿಗಾಗಿ ಸಮಯ ಮೀಸಲಿಟ್ಟಿದ್ದಕ್ಕೆ ರಾಹುಲ್‌ ಗಾಂಧಿ ಅವರಿಗೆ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ, ತಮ್ಮ ಜೊತೆಗಿನ ಚರ್ಚೆ ಮುಂದಿನ ದಿನಗಳಲ್ಲಿ ನಿಮಗೂ ಉಪಯೋಗಕ್ಕೆ ಬರಬಹುದು ಅಂತ ಅಂದುಕೊಂಡಿದ್ದೇನೆ ಎಂದು  ಕಮಲ್ ಹಾಸನ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ