ಸಂಜಯ್ ದತ್ ಜೊತೆಗೆ ರಣಬೀರ್ ಕಪೂರ್ ಕ್ಲೋಸ್ ಆಗಿರುವುದು ಇವರಿಗೆ ಇಷ್ಟವಿರಲಿಲ್ಲವಂತೆ

ಭಾನುವಾರ, 24 ಜೂನ್ 2018 (07:50 IST)
ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನಾಧಾರಿತ ಚಿತ್ರ ‘ಸಂಜು’ ಸಿನಿಮಾದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಅವರು ಸಂಜಯ್ ದತ್ ಅವರ ಪಾತ್ರವನ್ನು ಬಹಳ ಅದ್ಭುತವಾಗಿ ನಿರ್ವಹಿಸಿದ್ದಾರೆ. ಇದಕ್ಕೆ ಕಾರಣ ಅವರಿಬ್ಬರ ನಡುವೆ ಇರುವ ಸ್ನೇಹಸಂಬಂಧ ಎಂದು ಹಲವರು ಹೇಳಿದ್ದರೂ ಕೂಡ ಅವರಿಬ್ಬರ  ಸ್ನೇಹ ಬಾಲಿವುಡ್ ನ ಹಿರಿಯ ನಟರೊಬ್ಬರಿಗೆ ಇಷ್ಟವಿರಲಿಲ್ಲವಂತೆ.


ಹಾಗಾದ್ರೆ ಅವರ್ಯಾರು ಎಂಬ ಕುತೂಹಲ ಹಲವರಲ್ಲಿ ಮೂಡಿರುತ್ತದೆ. ಅವರು ಬೇರೆ ಯಾರು ಅಲ್ಲ ನಟ ರಣಬೀರ್ ಕಪೂರ್ ಅವರ ತಂದೆ ರಿಶಿ ಕಪೂರ್. ರಣಬೀರ್ ಕಪೂರ್ ಸಂಜಯ್ ದತ್ ಅವರ ಜೊತೆ ಕ್ಲೋಸ್ ಆಗಿರುವುದನ್ನು ನೋಡಿ 'ನನ್ನ ಮಗನನ್ನ ನಿನ್ನ ಹಾಗೆ ಮಾಡಬೇಡ' ಎಂದು ಸಂಜಯ್ ದತ್ ಗೆ ರಿಶಿ ಕಪೂರ್ ಒಂದು ಸಾರಿ ಬೈದಿದ್ರಂತೆ.


ಆದರೆ ಈಗ 'ಸಂಜು' ಚಿತ್ರದ ಟ್ರೈಲರ್ ನೋಡಿ ಭೇಷ್ ಹೇಳಿದ್ಧಾರೆ. ಅವರ ಪ್ರತಿಕ್ರಿಯೆ ನನಗೆ ತುಂಬಾ ಖುಷಿ ಕೊಟ್ಟಿದೆ. ಸಿನಿಮಾ ನೋಡಿದ್ಮೇಲೆ, ಅವರ ಫೀಡ್ಬ್ಯಾಕ್ ಕೇಳೋಕೆ ನಾನು ಕಾಯ್ತಿದ್ದೇನೆ ಎಂದು ಇತ್ತೀಚೆಗೆ ರಣಬೀರ್ ಕಪೂರ್ ಅವರು ಸಂತಸದಿಂದ ಹೇಳಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ