ಕತ್ರಿನಾ ಕೈಫ್-ವಿಕ್ಕಿ ಹುಡುಗಿ ನೋಡುವ ಶಾಸ್ತ್ರ!

ಸೋಮವಾರ, 8 ನವೆಂಬರ್ 2021 (09:23 IST)
ಮುಂಬೈ: ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಬಾಲಿವುಡ್ ಜೋಡಿ ಕತ್ರಿನಾ ಕೈಫ್, ವಿಕ್ಕಿ ಕೌಶಾಲ್ ಈಗ ಮದುವೆಯ ಮೊದಲ ಹಂತ ಪೂರ್ತಿ ಮಾಡಿದ್ದಾರೆ.

ನಿನ್ನೆ ನಿರ್ದೇಶಕ ಕಬೀರ್ ಖಾನ್ ಮನೆಯಲ್ಲಿ ವಿಕ್ಕಿ ಕೌಶಾಲ್ ಹುಡುಗಿ ನೋಡುವ ಶಾಸ್ತ್ರ ನೆರವೇರಿದೆ. ಎರಡೂ ಕಡೆಯ ಕುಟುಂಬಸ್ಥರು ಮೊದಲ ಬಾರಿಗೆ ಒಟ್ಟು ಸೇರಿ ಮದುವೆ ಮಾತುಕತೆ ನಡೆಸುವ ಶಾಸ್ತ್ರ ಇದಾಗಿದೆ.

ಕತ್ರಿನಾರ ಕೆಲವು ಸಿನಿಮಾಗಳಿಗೆ ನಿರ್ದೇಶಕರಾಗಿದ್ದ ಕಬೀರ್ ಖಾನ್ ಅವರ ಸಹೋದರ ಸಮಾನರು. ಹೀಗಾಗಿ ಅವರ ಮನೆಯಲ್ಲೇ ಈ ಶಾಸ್ತ್ರ ನೆರವೇರಿದೆ ಎನ್ನಲಾಗಿದೆ. ಡಿಸೆಂಬರ್ ನಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ