ಕೆಜಿಎಫ್ 3 ರಲ್ಲಿ ಹೃತಿಕ್ ರೋಷನ್? ವಿಜಯ ಕಿರಗಂದೂರು ಏನು ಹೇಳಿದ್ರು?

ಶನಿವಾರ, 28 ಮೇ 2022 (10:00 IST)
ಬೆಂಗಳೂರು: ಕೆಜಿಎಫ್ 3 ನೇ ಭಾಗವಾಗಲಿದೆ ಎಂದು ಹೊಂಬಾಳೆ ಫಿಲಂಸ್ ಅಧಿಕೃತವಾಗಿ ಹೇಳಿಕೆ ನೀಡಿದ ಮೇಲೆ ಈ ಸಿನಿಮಾದಲ್ಲಿ ಯಾರೆಲ್ಲಾ ಪಾತ್ರ ಮಾಡಲಿದ್ದಾರೆ ಎಂದು ದಿನಕ್ಕೊಂದು ಸುದ್ದಿ ಹಬ್ಬುತ್ತಲೇ ಇದೆ.

ಈ ನಡುವೆ ಬಾಲಿವುಡ್ ನಟ ಹೃತಿಕ್ ರೋಷನ್ ಕೆಜಿಎಫ್ 3 ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ಈಗ ನಿರ್ಮಾಪಕ ವಿಜಯ್ ಕಿರಗಂದೂರು ಸ್ಪಷ್ಟನೆ ನೀಡಿದ್ದಾರೆ.

‘ಕೆಜಿಎಫ್ 3 ಸಿನಿಮಾ ಮಾಡುವುದಾಗಿ ತೀರ್ಮಾನಿಸಿದ್ದೇವಷ್ಟೇ. ಆದರೆ ಸದ್ಯಕ್ಕೆ ಈ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರಶಾಂತ್ ನೀಲ್ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಮುಂದಿನ ವರ್ಷವಷ್ಟೇ ಚಿತ್ರಕ್ಕೆ ಚಾಲನೆ ಸಿಗಲಿದೆ. ಅಲ್ಲಿಯವರೆಗೆ ಯಾವುದೂ ತೀರ್ಮಾನವಾಗಲ್ಲ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ