ಸಂಚಾರ ನಿಯಮ ಉಲ್ಲಂಘನೆ: ಖ್ಯಾತ ರಾಪರ್‌ ಬಾದ್‌ಶಾಗೆ ಬಿತ್ತು ಭಾರೀ ದಂಡ

Sampriya

ಮಂಗಳವಾರ, 17 ಡಿಸೆಂಬರ್ 2024 (19:34 IST)
Photo Courtesy X
ಗುರುಗ್ರಾಮ: ಗುರುಗ್ರಾಮದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ರಾಂಗ್ ಲೇನ್‌ನಲ್ಲಿ ವಾಹನ ಚಲಾಯಿಸಿದ್ದಕ್ಕಾಗಿ ದೇಶದ ಖ್ಯಾತ ರಾಪರ್ ಬಾದ್‌ಶಾಗೆ 15,500 ದಂಡ ವಿಧಿಸಲಾಗಿದೆ. ಮೂರು ಕಾರುಗಳನ್ನು ಒಳಗೊಂಡಿರುವ ಬಾದ್‌ಶಾ ಅವರ ಬೆಂಗಾವಲು ವಾಹಜನ ರಸ್ತೆಯ ರಾಂಗ್ ಸೈಡ್‌ನಲ್ಲಿ ಸಂಚಾರಿಸಿದ್ದಕ್ಕಾಗಿ ಇದೀಗ ಭಾರೀ ದಂಡವನ್ನು ಕಟ್ಟಬೇಕಾಗಿದೆ.

ಡಿಸೆಂಬರ್ 15 ರಂದು ಪಂಜಾಬಿ ಗಾಯಕ ಕರಣ್ ಔಜ್ಲಾ ಅವರ ಸಂಗೀತ ಕಚೇರಿಯನ್ನು ತಲುಪಲು ಮಹೀಂದ್ರಾ ಥಾರ್ ಅನ್ನು ಓಡಿಸುತ್ತಿದ್ದ ಬಾದ್‌ಶಾಹ್‌ಗೆ ಗುರುಗ್ರಾಮ್ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ.

ಆದರೆ, ಈ ವಾಹನವು ರಾಪರ್‌ಗೆ ಸೇರಿದ್ದಲ್ಲ ಮತ್ತು ಪಾಣಿಪತ್‌ನ ಯುವಕನ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಹೇಳಲಾಗುತ್ತಿದೆ.

ಬಾದ್‌ಶಾ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಪೋಸ್ಟ್ ವೈರಲ್ ಆದ ನಂತರ, ಗುರುಗ್ರಾಮ್ ಟ್ರಾಫಿಕ್ ಪೊಲೀಸರು ರಾಪರ್‌ಗೆ ಚಲನ್ ನೀಡಿದ್ದಾರೆ.

ಪಂಜಾಬಿ ಗಾಯಕ ಕರಣ್ ಔಜ್ಲಾ ಅವರ ಬೆಂಗಾವಲು ಪಡೆಯ 3 ವಾಹನಗಳು ಏರಿಯಾ ಮಾಲ್ ಕಡೆಗೆ ರಾಂಗ್ ಸೈಡ್‌ನಲ್ಲಿ ಹೋಗುತ್ತಿವೆ, ಮತ್ತು ಬೌನ್ಸರ್‌ಗಳು ಸಹ ಜನರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ, ಆದರೆ ಗುರುಗ್ರಾಮ್ ಪೊಲೀಸರು ಮಲಗಿದ್ದಾರೆ" ಎಂದು 'ಎಕ್ಸ್' ಬಳಕೆದಾರರು ಬರೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ