ಪತ್ನಿಯ ಸಿನಿಮಾ ಪ್ರಚಾರ ಕೆಲಸಕ್ಕಿಳಿದ ವಿರಾಟ್ ಕೊಹ್ಲಿ

ಗುರುವಾರ, 8 ಫೆಬ್ರವರಿ 2018 (10:42 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅಭಿನಯದ ಪರಿ ಸಿನಿಮಾದ ಪ್ರಚಾರಕ್ಕಿಳಿದಿದ್ದಾರೆ.
 

ನಿನ್ನೆಯಷ್ಟೇ ಅನಷ್ಕಾ ಅಭಿನದಯ ಪರಿ ಸಿನಿಮಾ ಟೀಸರ್ ಬಿಡುಗಡೆಯಾಗಿತ್ತು. ಅನಷ್ಕಾ ಭಯಹುಟ್ಟಿಸುವ ಅವತಾರದಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ಪೋಸ್ಟರ್ ಗಳು ಈಗಾಗಲೇ ಕುತೂಹಲ ಹುಟ್ಟಿಸಿವೆ.

ಇಂತಹ ಸಂದರ್ಭದಲ್ಲಿ ಪತ್ನಿಯ ಸಿನಿಮಾ ಟೀಸರ್ ಹೊಗಳಿ ಕೊಹ್ಲಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ‘ಇದು ಭೂತದ ಕತೆ ಅಲ್ಲ. ಅದ್ಭುತ ಪರಿ ಟೀಸರ್. ನನಗೆ ಇಷ್ಟವಾಯಿತು’ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ. ಮೊನ್ನೆಯಷ್ಟೇ ಕೊಹ್ಲಿ ಶತಕ ಹೊಡೆದಾಗ ಅನುಷ್ಕಾ ಬೆನ್ನು ತಟ್ಟಿ ಟ್ವೀಟ್ ಮಾಡಿದ್ದರು. ಇದೀಗ ಕೊಹ್ಲಿ ಸರದಿ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ