ಯೋಧರ ಮೇಲಿನ ಪ್ರೀತಿಯಿಂದ ನಟ ಅಕ್ಷಯ್ ಕುಮಾರ್ ಮಾಡಿದ್ದೇನು…?
ಸೋಮವಾರ, 22 ಜನವರಿ 2018 (06:07 IST)
ಮುಂಬೈ : ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಮಾಡುತ್ತಿರುವ ಸಮಾಜ ಸೇವಾ ಕಾರ್ಯಗಳು ಇತರ ನಟರಿಗೂ ಸ್ಫೂರ್ತಿದಾಯಕವಾಗಿದ್ದು, ಭಾರತೀಯ ಯೋಧರ ಮೇಲೆ ಪ್ರೀತಿ ಅಭಿಮಾನ ಹೊಂದಿರುವ ಅವರು ಹುತಾತ್ಮರಾದ ಯೋಧರ ಕುಟುಂಬಕ್ಕೆ ಸಾಧ್ಯವಾದಷ್ಟು ನೆರವು ನೀಡಿದ್ದಾರೆ.
ನಟ ಅಕ್ಷಯ್ ಕುಮಾರ್ ಅವರು ಹುತಾತ್ಮರಾದ ಯೋಧರ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಪ್ರಾರಂಭವಾದ ‘ಭಾರತ್ ಕೆ ವೀರ್’ ವೆಬ್ ಸೈಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವಾಗ ಅವರು ಇಲ್ಲಿಂದಲ್ಲೇ, ಈಗಿನಿಂದಲೇ ಪ್ರಾರಂಭಿಸೋಣ ಎನ್ನುತ್ತಿದ್ದಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ನೆರವು ನೀಡತೊಡಗಿದ್ದರು. ಕ್ಷಣಾರ್ಧದಲ್ಲಿ 12.93 ಕೋಟಿ ರೂ. ಸಂಗ್ರಹವಾಗುವುದರ ಮೂಲಕ, ‘ಭಾರತ್ ಕೆ ವೀರ್’ ವೆಬ್ ಸೈಟ್ ಉತ್ತಮ ರೀತಿಯಲ್ಲಿ ಬಿಡುಗಡೆ ಪಡೆಯಿತು. ಅವರ ಈ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ