ಶೂಟಿಂಗ್ ಮುಗಿಸಿ ವಾಪಾಸಾದ ಅಭಿಷೇಕ್ ಬಚ್ಚನ್ ಗೆ ಮಗಳು ಆರಾಧ್ಯ ನೀಡಿದ ಆಚ್ಚರಿ ಏನು ಗೊತ್ತಾ..?

ಶುಕ್ರವಾರ, 27 ಏಪ್ರಿಲ್ 2018 (06:50 IST)
ಮುಂಬೈ : ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ಸಿನಿಮಾವೊಂದರ ಶೂಟಿಂಗ್ ಗಾಗಿ ಕುಟುಂಬದವರಿಂದ ದೂರವಿದ್ದು ನಂತರ ತಮ್ಮ ಕಚೇರಿಗೆ ವಾಪಾಸ್ಸಾದಾಗ ಅವರಿಗೊಂದು ಅಚ್ಚರಿ ಕಾದಿತ್ತು.


ನಟ ಅಭಿಷೇಕ್ ಬಚ್ಚನ್ ಅವರು ಅನುರಾಗ್ ಕಶ್ಯಪ್ ಅವರ 'ಮನ್ ಮರ್ಜಿಯಾನ್' ಚಿತ್ರದಲ್ಲಿ ನಟಿಸುತ್ತಿದ್ದು, ಆ ಚಿತ್ರದ ಶೂಟಿಂಗ್ ಗಾಗಿ ಎರಡು ತಿಂಗಳ ಕಾಲ ಕಾಶ್ಮೀರಕ್ಕೆ ತೆರಳಿದ್ದರು. ಎರಡು ತಿಂಗಳ ಬಳಿಕ ತಮ್ಮ ಕಚೇರಿಗೆ ಬಂದಾಗ ಅವರಿಗಾಗಿ ಒಂದು ಅಚ್ಚರಿ ಕಾದಿತ್ತು. ಅದೇನೆಂದರೆ ಅವರ ಮಗಳು ಆರಾಧ್ಯ ನೋಟ್ ಬುಕ್ನಲ್ಲಿ ತಂದೆಗೆ ವೆಲ್ ಕಮ್ ಎಂದು ಬರೆದಿದ್ದಳು. ಇದನ್ನು ನೋಡಿ ಸಂತೋಷಗೊಂಡ ನಟ ಅಭಿಷೇಕ್ ಅವರು ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ಫೋಟೋವನ್ನು ಶೇರ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ