ಯಾರಿಂದ ತಪ್ಪಿಸಿಕೊಳ್ಳಲು ಕಾಲಿವುಡ್ ನಟ ಸೂರ್ಯ ಅವರು ಚಿತ್ರಮಂದಿರದ ಗೇಟ್ ಹಾರಿದ್ದು...?

ಗುರುವಾರ, 18 ಜನವರಿ 2018 (07:41 IST)
ಆಂಧ್ರಪ್ರದೇಶ : ಕಾಲಿವುಡ್ ನಟ ಸೂರ್ಯ ಅವರು ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಚಿತ್ರಮಂದಿರದ ಗೇಟ್ ಹಾರಿದ ಘಟನೆ ನಡೆದಿದೆ.


ಕಳೆದ ವಾರ ಸೂರ್ಯ ಅವರು ಅಭಿನಯಿಸಿದ ಗ್ಯಾಂಗ್ ಚಿತ್ರ ಬಿಡುಗಡೆಯಾಗಿದ್ದು ಅದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದ್ದು, ತಮಿಳು, ತೆಲುಗು ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದ ಕಾರಣ ಚಿತ್ರ ಪ್ರಮೋಷನ್ ಗಾಗಿ ಆಂಧ್ರಪ್ರದೇಶದ ರಾಜಮಂಡ್ರಿ ಜಿಲ್ಲೆಗೆ ಸೂರ್ಯ ಅವರು ಬಂದಿದ್ದರು. ಈ ವಿಷಯ ತಿಳಿದ ಅಭಿಮಾನಿಗಳು ಅವರನ್ನು ನೋಡಲು ಚಿತ್ರಮಂದಿರದ ಬಳಿ ಆಗಮಿಸಿದ್ದಾಗ ಅವರಿಂದ ತಪ್ಪಿಸಿಕೊಳ್ಳಲು ಸೂರ್ಯ ಅವರು ಕ್ಲೋಸ್ ಮಾಡಿದ್ದ ಚಿತ್ರಮಂದಿರದ ಗೇಟ್ ಹಾರಿ ತಮ್ಮ ಕಾರಿನಲ್ಲಿ ಹೋಗಿದ್ದಾರೆ. ಅವರು ಗೇಟ್ ಹಾರಿದ ಆ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ