ಹೌದು ಇದೇ ಜನೇವರಿ 25 ರಂದು ಪದ್ಮಾವತ್ ಚಿತ್ರ ಬಿಡುಗಡೆಯಾಗುತ್ತಿದೆ. ಈ ಕುರಿತಂತೆ ಹೇಳಿಕೆ ನೀಡಿರುವ ಗುಜರಾತ್ ಮುಖ್ಯಮಂತ್ರಿ ವಸುಂಧರಾ ರಾಜೆ, ರಾಣಿ ಪದ್ಮಿನಿಯ ತ್ಯಾಗವು ರಾಜ್ಯದ ಗೌರವ ಮತ್ತು ಘನತೆಯ ಪ್ರತೀಕವಾಗಿದೆ. ಆದ್ದರಿಂದ ರಾಣಿ ಪದ್ಮಿನಿ ಇತಿಹಾಸದಲ್ಲಿ ಒಂದು ಅಧ್ಯಾಯ ಮಾತ್ರವಲ್ಲ ಅದು ನಮ್ಮ ರಾಜ್ಯದ ಘನತೆಯಾಗಿದ್ದು ಅದಕ್ಕೆ ದಕ್ಕೆ ಆಗದಂತೆ ನೆಡೆದುಕೊಳ್ಳುವುದು ನಮ್ಮೆಲ್ಲರ ಹೊಣೆ ಹಾಗಾಗೀ ಈ ಚಿತ್ರವು ಅವರ ಕುರಿತಾಗಿದ್ದು, ಅವರಿಗೆ ಅಪಮಾನವಾಗುವುದಕ್ಕೆ ನಾವು ಆಸ್ಪತ ಕೊಡುವುದಿಲ್ಲ ಎಂಬುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ ಪದ್ಮಾವತ್ ಚಿತ್ರವು ಹಿಂದಿನ ಕಾಲದ ರಜಪೂತ ಸಂಸ್ಥಾನಕ್ಕೆ ಸೇರಿದ ಕಥೆಯಾಗಿದ್ದು, ರಾಜ್ಯದ ಜನರ ಭಾವನೆಗಳನ್ನು ಗಮನದಲ್ಲಿರಿಸಿಕೊಂಡು ಈ ಚಿತ್ರವನ್ನು ರಾಜಸ್ಥಾನದಲ್ಲಿ ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಹಲವಾರು ರಜಪೂತ ಸಂಸ್ಥೆಗಳು ಸೇರಿಕೊಂಡು 'ಪದ್ಮಾವತ್' ಬಿಡುಗಡೆಯನ್ನು ವಿರೋಧಿಸಿ ಪ್ರತಿಭಟಿಸಿರುವುದು ಮಾತ್ರವಲ್ಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಿದಲ್ಲಿ ಪೆಟ್ರೋಲ್ ಸುರಿದು ಬಂದು ಬೆಂಕಿ ಹಾಕುವುದಾಗಿ ಬೆದರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ರಾಷ್ಟ್ರೀಯ ರಜಪೂತರ ಕರ್ಣಿ ಸೇನಾ ಅಧ್ಯಕ್ಷರಾದ ಸುಖದೇವ್ ಸಿಂಗ್ ಗೋಗೆಮಿಡಿ ಅವರು ನಮ್ಮ ತಾಯಿ ರಾಣಿ ಪದ್ಮಾವತಿಯ ಘನತೆಗೆ ದಕ್ಕೆ ಬರುವುದನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದಷ್ಟೇ ಅಲ್ಲ ಒಂದು ವೇಳೆ ಈ ಚಿತ್ರವನ್ನು ಜ. 25ಕ್ಕೆ ಪ್ರದರ್ಶಿಸಲು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಸಂಸ್ಥೆ ಅನುವು ಮಾಡಿದಲ್ಲಿ ಭಾರತವೇ ಹೊತ್ತಿ ಉರಿಯಲಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ.