ಐಪಿಎಲ್-11 ಉದ್ಘಾಟನಾ ಕಾರ್ಯಕ್ರಮದಲ್ಲಿ ರಣ್‍ವೀರ್ ಸಿಂಗ್ ಡ್ಯಾನ್ಸ್ ಮಾಡುವುದನ್ನು ಕ್ಯಾನ್ಸಲ್ ಮಾಡಿದ್ಯಾಕೆ..?

ಬುಧವಾರ, 4 ಏಪ್ರಿಲ್ 2018 (07:38 IST)
ಮುಂಬೈ : ಇತ್ತಿಚೆಗಷ್ಟೇ ಐಪಿಎಲ್-11 ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ  ರಣ್‍ವೀರ್ ಸಿಂಗ್ ಅವರು ಡ್ಯಾನ್ಸ್ ಮಾಡಲಿದ್ದು, ಅದಕ್ಕಾಗಿ ಅವರು 15 ಕೋಟಿ ರೂ ಸಂಭಾವನೆ ಕೂಡ ಪಡೆದಿದ್ದರು ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಇದೀಗ ಅವರು ಈ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುವುದಿಲ್ಲ ಎಂಬುದಾಗಿ ತಿಳಿದುಬಂದಿದೆ.


ಇದಕ್ಕೆ ಕಾರಣವೆನೆಂದರೆ ಇತ್ತೀಚೆಗೆ ರಣ್‍ವೀರ್ ಸಿಂಗ್ ಅವರು ಫುಟ್‍ಬಾಲ್ ಪಂದ್ಯದ ವೇಳೆ ತಮ್ಮ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಆದಕಾರಣ ಹಲವಾರು ವೈದ್ಯಕೀಯ ಪರೀಕ್ಷೆ ನಡೆಸಿದ  ವೈದ್ಯರು ರಣ್‍ವೀರ್ ಅವರು ಡ್ಯಾನ್ಸ್ ಮಾಡುವುದರಿಂದ ಭುಜದ ನೋವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿರುವುದರಿಂದ  ಐಪಿಎಲ್ ನಲ್ಲಿ ಡ್ಯಾನ್ಸ್ ಮಾಡುವುದು ಬೇಡ ಎಂದು ಸಲಹೆ ನೀಡಿದ್ದಾರೆ. ಆದ್ದರಿಂದ ಅವರು  ಐಪಿಎಲ್-11 ಉದ್ಘಾಟನಾ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿಲ್ಲ.


ಹಾಗೇ ರಣ್‍ವೀರ್ ಸಿಂಗ್ ಅವರು ಅಭಿಮಾನಿಗಳಿಗೆ ಟ್ವೀಟ್ ಮಾಡಿ,’ ನಿಮ್ಮ ಎಲ್ಲ ಶುಭ ಹಾರೈಕೆಗಳಿಗೆ ಧನ್ಯವಾದಗಳು. ನಾನು ಆರೋಗ್ಯವಾಗಿದ್ದೇನೆ. ನನ್ನ ಎಡಭಾಗದ ಭುಜ ಸ್ವಲ್ಪ ನೋವಾಗಿದ್ದು, ನಾನು ಇನ್ನಷ್ಟು ಶಕ್ತಿಶಾಲಿಯಾಗಿ ಹಿಂತಿರುಗಿ ಬರುತ್ತೇನೆ. ಲವ್ ಯೂ ಆಲ್” ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ