ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರದಲ್ಲಿ ನಟಿಸಲು ಶಾರುಕ್ ಖಾನ್ ನೋ ಅಂದಿದ್ಯಾಕೆ...?

ಭಾನುವಾರ, 18 ಫೆಬ್ರವರಿ 2018 (06:25 IST)
ಮುಂಬೈ : ಸಂಜಯ್ ಲೀಲಾ ಬನ್ಸಾಲಿ ಅವರ  ನಿರ್ದೇಶನದ ಪದ್ಮಾವತ್ ಚಿತ್ರ ವಿರೋಧಗಳ ನಡುವೆಯೂ ಬಿಡುಗಡೆಗೊಂಡು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಕೂಡ ಮಾಡಿರುವ ವಿಷಯ ಎಲ್ಲರಿಗೂ ತಿಳಿದೆ ಇದೆ.


ಈಗ ಸಂಜಯ್ ಲೀಲಾ ಬನ್ಸಾಲಿ ಅವರು ಲವ್ ಸ್ಟೋರಿ ಚಿತ್ರವೊಂದನ್ನು ನಿರ್ಮಾಣ ಮಾಡಲು ರೆಡಿಯಾಗಿದ್ದು,ಈ ಚಿತ್ರದಲ್ಲಿ  ಶಾರುಕ್ ಖಾನ್ ಅವರು ನಾಯಕನಾಗಿ ಹಾಗೂ ದೀಪಿಕಾ ಪಡುಕೋಣೆ ಅಥವಾ ಕಂಗನಾ ರನಾವತ್ ಅವರು ನಾಯಕಿಯಾಗಲಿದ್ದಾರೆ ಎಂಬ ಮಾಹಿತಿ  ತಿಳಿದುಬಂದಿದೆ. ಆದರೆ ಶಾರುಕ್ ಖಾನ್ ಅವರು ಮಾತ್ರ ಈ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದಾರಂತೆ. ಈ ಹಿಂದೆ ಕೂಡ ಹಲವು ಬಾರಿ ಬನ್ಸಾಲಿ, ಶಾರುಕ್ ಜೊತೆಗೆ ಸ್ಕ್ರಿಪ್ಟ್ ಚರ್ಚಿಸಿದ್ರು. ಆದ್ರೆ ಯಾವುದೂ ಶಾರುಕ್ ಗೆ ಇಷ್ಟವಾಗಿರಲಿಲ್ಲವಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ