ತೆರಿಗೆ ಮಿತಿ ಏರಿಕೆ, ರಾಜಕೀಯ ದೇಣಿಗೆ ತೆರಿಗೆಮುಕ್ತ

ಸೋಮವಾರ, 6 ಜುಲೈ 2009 (15:08 IST)
ಆದಾಯ ತೆರಿಗೆದಾರರಿಗೆ ಈ ಬಜೆಟ್ ಕೊಂಚ ಮಟ್ಟಿಗೆ ನೆಮ್ಮದಿಯ ಸುದ್ದಿ ಒದಗಿಸಿದೆ. ಪ್ರಣಬ್ ಮುಖರ್ಜಿ ಸೋಮವಾರ ಮಂಡಿಸಿದ 2009-10 ಆಯವ್ಯಯ ಪತ್ರದಲ್ಲಿ ಆದಾಯ ಮಿತಿಯನ್ನು 1.50ರಿಂದ 1.60 ಲಕ್ಷ ರೂ.ಗೆ, ಮಹಿಳೆಯರ ಆದಾಯ ಮಿತಿಯನ್ನು 1.80 ಲಕ್ಷದಿಂದ 1.90 ಲಕ್ಷ ಹಾಗೂ ಹಿರಿಯ ನಾಗರಿಕರ ಆದಾಯ ಮಿತಿಯನ್ನು 2.25 ಲಕ್ಷದಿಂದ 2.40 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಈ ಮಧ್ಯೆ, ರಾಜಕೀಯ ದೇಣಿಗೆಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಿರುವುದು ರಾಜಕೀಯ ಪಕ್ಷಗಳ ನೆಲೆ ಭದ್ರಪಡಿಸುವ ಗುರಿ ಹೊಂದಿದೆ.

ಹೊಸ ಆದಾಯ ತೆರಿಗೆ ನೀತಿಯು 45 ದಿನಗಳಲ್ಲಿ ಜಾರಿಗೆ ಬರಲಿದೆ ಎ0ದು ಪ್ರಣಬ್ ಲೋಕಸಭೆಗೆ ತಿಳಿಸಿದರು.

ಇನ್ನುಳಿದಂತೆ, ರಫ್ತುದಾರರಿಗೆ ತೆರಿಗೆ ರಜೆ 2011ರವರೆಗೆ ವಿಸ್ತರಣೆ, ವೈಯಕ್ತಿಕ ಆದಾಯ ಮೇಲಿನ ಸರ್ಚಾರ್ಜ್ ರದ್ದು ಹಾಗೂ ನೌಕರರ ಹೆಚ್ಚುವರಿ ಸೌಲಭ್ಯದ ಮೇಲಿನ ತೆರಿಗೆ ರದ್ದು ವಿಷಯವೂ ಬಜೆಟ್ ಪ್ರಸ್ತಾಪದಲ್ಲಿದೆ.

ಇದರೊಂದಿಗೆ, ಕಾರ್ಪೊರೇಟ್ ತೆರಿಗೆ ನೀತಿಯಲ್ಲಿ ಯಾವುದೇ ಬದಲಾವಣೆ ಘೋಷಿಸಿಲ್ಲ.

ವೆಬ್ದುನಿಯಾವನ್ನು ಓದಿ