ಬಾಳೆಕಾಯಿ ಹಚ್ಚಿ ಕೈ ಕಪ್ಪಗಾಗಿದ್ದರೆ ಈ ಸಿಂಪಲ್ ಟ್ರಿಕ್ ಉಪಯೋಗಿಸಿ

Krishnaveni K

ಶುಕ್ರವಾರ, 10 ಮೇ 2024 (13:34 IST)
ಬೆಂಗಳೂರು: ಸಾಮಾನ್ಯವಾಗಿ ಬಾಳೆಕಾಯಿಯಂತಹ ಮೇಣದ ಅಂಶವಿರುವ ತರಕಾರಿ ಕಟ್ ಮಾಡಿದರೆ ಕೈ ಕಪ್ಪಗಾಗುವುದು ಸಹಜ. ಇದರಿಂದ ಕೈ ಅಸಹ್ಯವಾಗಿ ಕಾಣುತ್ತಿದ್ದರೆ ಇಲ್ಲಿದೆ ಟಿಪ್ಸ್.

ಬಾಳೆಕಾಯಿ ಹಚ್ಚಿದಾಗ ಕೈ ಕಪ್ಪಗಾಗುವುದರ ಜೊತೆಗೆ ಕೈ ಅಂಟು ಅಂಟಾಗುತ್ತದೆ. ಇದರಿಂದ ಕೈ ಅಸಹ್ಯವಾಗಿ ಕಾಣುತ್ತದೆ. ಸಾಮಾನ್ಯವಾಗಿ ಎಲ್ಲರೂ ಬಾಳೆಕಾಯಿ ಹಚ್ಚಿದಾಗ ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿ ಕೈ ತೊಳೆದುಕೊಳ್ಳುತ್ತಾರೆ. ಆದರೆ ಇದು ಎಲ್ಲರಿಗೂ ಇಷ್ಟವಾಗುವುದಿಲ್ಲ.

ಎಣ್ಣೆ ಹಚ್ಚುವುದರಿಂದ ಕೈಗೆ ಅಂಟಿದ ಜಿಡ್ಡು ಹೋಗುವುದಿಲ್ಲ. ಹೀಗಾಗಿ ಕೆಲವರು ಎಣ್ಣೆ ಹಚ್ಚುವುದನ್ನು ಇಷ್ಟಪಡುವುದಿಲ್ಲ. ಅಲ್ಲದೆ, ಎಣ್ಣೆ ಹಚ್ಚಿಕೊಳ್ಳುವುದರಿಂದ ಕಪ್ಪು ಕಲೆ ಸುಲಭವಾಗಿ ಹೋಗುತ್ತದೆ ಎಂಬ ಗ್ಯಾರಂಟಿಯಿಲ್ಲ. ಹೀಗಾಗಿ ಕಪ್ಪು ಕಲೆಯ ಜೊತೆಗೆ ಅಂಟು ಕೂಡಾ ಹೋಗಲು ಬೆಸ್ಟ್ ಸಾಧನ ಎಂದರೆ ಮಜ್ಜಿಗೆ.

ಬಾಳೆಕಾಯಿ ಹಚ್ಚಿದ ತಕ್ಷಣ ಸ್ವಲ್ಪ ಹುಳಿಯಿರುವ ಮಜ್ಜಿಗೆಯಲ್ಲಿ ಕೈ ಮತ್ತು ಹಚ್ಚಿದ ಚಾಕುವನ್ನು ಚೆನ್ನಾಗಿ ತೊಳೆದುಕೊಂಡರೆ ಕೈಗೆ ಅಂಟಿರುವ ಅಂಟಿನ ಜೊತೆಗೆ ಕಲೆಯೂ ಸಂಪೂರ್ಣವಾಗಿ ನಾಶವಾಗುತ್ತದೆ. ಮಜ್ಜಿಗೆಯಲ್ಲಿರುವ ಹುಳಿ ಅಂಶ ಕಲೆ ನಾಶಕವಾಗಿ ಕೆಲಸ ಮಾಡುತ್ತದೆ. ಈ ಸಿಂಪಲ್ ಟ್ರಿಕ್ ಮಾಡಿ ನೋಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ