ಕರ್ನಾಟಕ ಲೈವ್ ಬಜೆಟ್ 2018-19: ಸಿಎಂ ಸಿದ್ದರಾಮಯ್ಯರಿಂದ ಬಜೆಟ್ ಮಂಡನೆ

ಶುಕ್ರವಾರ, 16 ಫೆಬ್ರವರಿ 2018 (11:45 IST)
ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ದಾಖಲೆಯ 13 ನೇ ಬಜೆಟ್ ಮಂಡಿಸುತ್ತಿದ್ದು, ಐದು ವರ್ಷಗಳ ಸರಕಾರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


 
ನಾನು ಅರ್ಥಶಾಸ್ತ್ರವನ್ನು ಶಾಸ್ತ್ರಿಯವಾಗಿ ಅಧ್ಯಯನ ಮಾಡಿಲ್ಲ. ಆದರೆ, ನಾನು ರೈತ ಕುಟುಂಬದಲ್ಲಿ ಹುಟ್ಟಿದ್ದರಿಂದ ಕಷ್ಟ ಸುಖಗಳ ಅರಿವಿದೆ. ಕರ್ನಾಟಕದಲ್ಲಿ ಉದ್ಯೋಗ ಸಹಿತ ಅಭಿವೃದ್ಧಿಯಾಗುತ್ತಿದೆ. ನಮ್ಮದು ರೈತ ಸ್ನೇಹಿ ಸರಕಾರವಾಗಿದೆ ಎಂದರು.

ಕೃಷಿ ಹೈನುಗಾರಿಕೆಯಲ್ಲಿ ಮುಂದಿದ್ದೇವೆ. ಬಂಡವಾಳ ಆಕರ್ಷಣೆಯಲ್ಲಿ ಮುಂದಿದೆ. ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸರಕಾರ ಬೃಹತ್ ಸಾಧನೆ ಮಾಡಿದೆ. ಸುಭದ್ರ ಸರಕಾರದ ಆಶಯಗಳನ್ನು ಈಡೇರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಖಾಸಗಿ ಕ್ಷೇತ್ರಗಳಲ್ಲೂ ಮೀಸಲಾತಿ ಜಾರಿಗೆ ಪ್ರಯತ್ನ ನಡೆದಿದೆ. ಸರಕಾರದ ಅಧಿಕಾರವಧಿಯಲ್ಲಿ ರಾಜ್ಯದ ಜನತೆಯ ಏಳಿಗೆಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

2018-19 ರಾಜ್ಯ ಬಜೆಟ್‌ನ ಮುಖ್ಯಾಂಶಗಳು

ನಿಧನ ಹೊಂದಿದ ರೈತನ 1 ಲಕ್ಷ ರೂ ಸಾಲ ಮನ್ನಾ

ಮೀನುಗಾರಿಕೆಗೆ 337 ಕೋಟಿ ಅನುದಾನ ಮೀಸಲು

ಶೇಂಗಾ ಬೆಳೆಗಾರರಿಗೆ 50 ಕೋಟಿ ವಿಶೇಷ ಪ್ಯಾಕೇಜ್

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ 1ಲಕ್ಷ ಸಾಲ ಮನ್ನಾ

ಪಶುಸಂಗೋಪನಾಗೆ 2242 ಕೋಟಿ ರೂ ಮೀಸಲು ಅನುದಾನ

ರೈತರಿಗೆ ಶೇ.3 ರ ಬಡ್ಡಿ ದರದಲ್ಲಿ 10 ಲಕ್ಷ ಸಾಲ

ಕೃಷಿ ಇಲಾಖೆಗೆ 5080 ಕೋಟಿ ರೂ ಮೀಸಲು ಅನುದಾನ

ಸಹಕಾರ ಕ್ಷೇತ್ರಕ್ಕೆ 1643 ಕೋಟಿ ರೂ ಅನುದಾನ

ರೇಷ್ಮೆ ಇಲಾಖೆಗೆ 479 ಕೋಟಿ ಅನುದಾನ

ಸಣ್ಣ ನೀರಾವರಿ ಇಲಾಖೆಗೆ 2099 ಕೋಟಿ ರೂ. ಅನುದಾನ

ಜಿಕೆವಿಕೆಯಲ್ಲಿ ನಂಜುಂಡಸ್ವಾಮಿ ಸಂಶೋಧನಾ ಪೀಠ

ಮುದ್ದೇಬಿಹಾಳದಲ್ಲಿ ನೂತನ ಕೃಷಿ ಸಂಶೋಧನಾ ಕೇಂದ್ರ

ಚಾಮರಾಜನಗರ ಜಿಲ್ಲೆಯಲ್ಲಿ ಕೃಷಿ ಕಾಲೇಜು ಸ್ಥಾಪನೆ

ತೋಟಗಾರಿಕೆ ಇಲಾಖೆಗೆ 1091 ಕೋಟಿ ರೂ. ಅನುದಾನ

ಮೈಸೂರು ವಿವಿಯಲ್ಲಿ ಬಸವ ಅಧ್ಯಯನ ಕೇಂದ್ರ
 
ಬಸವ ಅಧ್ಯಯನ ಕೇಂದ್ರ ಸ್ಥಾಪನೆಗೆ 2 ಕೋಟಿ ರೂ. ಅನುದಾನ
 
ಕಬ್ಬಕಟಾವು ಯಂತ್ರ ಖರೀದಿಗೆ ಸಹಾಯ ಧನ
 
ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು
 
ರಾಜ್ಯ ಮೇವು ಭದ್ರತಾ ನೀತಿ ಜಾರಿ
 
ರೈತರಿಗೆ ನೇರ ಆದಾಯ ಒದಗಿಸುವ ಕಾರ್ಯಕ್ರಮ
 
ಚಿಕ್ಕಮಗಳೂರಿನಲ್ಲಿ ಕುವೆಂಪು ಸ್ನಾತಕೋತ್ತರ ಕೇಂದ್ರ
 
ಸಾವಯುವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ
 
ಹೊಸಪೇಟೆ ತಾಲೂಕಿನ 30 ಕೆರೆಗಳಿಗೆ ನೀರು
 
ಸಿರಿಧಾನ್ಯ ಬೆಳೆಗಳ ಯೋಜನೆ 60 ಸಾವಿರ ಹೆಕ್ಟೇರ್‌ಗಳಿಗೆ ವಿಸ್ತರಣೆ
 
ಹುಲ್ಲು ಬಣವೆಗಳಿಗೆ ಬೆಂಕಿ ಬಿದ್ದರೆ 20 ಸಾವಿರ ಪರಿಹಾರ
 
ರೈತ ಬೆಳಕು ಯೋಜನೆಯಿಂದ 70 ಲಕ್ಷ ರೈತರಿಗೆ ಲಾಭ
 
ಕಬ್ಬು ಕಟಾವು ಯಂತ್ರಗಳ ಖರೀದಿಗೆ 20 ಕೋಟಿ ಸಹಾಯ ಧನ
 
ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್
 
ಭೂಮಾಪನ ಇಲಾಖೆಯಿಂದ ಐದು ಮೊಬೈಲ್ ಆ್ಯಪ್
 
ಪಿಂಚಣಿ ಮಾಸಾಶನ 500 ರೂ.ಗಳಿಂದ 600 ರೂ.ಗೆ ಏರಿಕೆ
 
ಕಂದಾಯ ಇಲಾಖೆಗೆ 6642 ಕೋಟಿ ರೂ.ಅನುದಾನ
 
10 ಡಬಲ್ ಡೆಕ್ಕರ್ ಬಸ್ ಖರೀದಿಗೆ ನಿರ್ಧಾರ
 
ಪ್ರಮುಖ ನಗರಗಳಲ್ಲಿ ಡಬಲ್ ಡೆಕ್ಕರ್ ಬಸ್ ಸಂಚಾರ
 
ಬೆಂಗಳೂರಿನ ಕೆ.ಆರ್.ಪುರಂನಲ್ಲಿ ನೀರು ಸಂಸ್ಕರಣಾ ಘಟಕ
 
325 ಬಸ್ ತಂಗುದಾಣಗಳು ಮೇಲ್ದರ್ಜೆಗೆ
 
ರಾಜ್ಯದ 16 ಜಿಲ್ಲೆಗಳಲ್ಲಿ ಕುರಿ ರೋಗ ತಪಾಸಣೆ ಕೇಂದ್ರ
 
ಕುರಿ, ಮೇಕೆ ಸಾಗಾಣಿಕೆ ಸಾಲ ಮನ್ನಾ
 
ಮಹಿಳಾ ಸುರಕ್ಷತೆಗಾಗಿ 1000 ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ
 
ಮದ್ಯದ ಮೇಲಿನ ಅಬಕಾರಿ ಸುಂಕದಲ್ಲಿ ಸೇ.8 ರಷ್ಟು ಹೆಚ್ಚಳ
 
ರಸ್ತೆ ಅಪಘಾತ ಸುರಕ್ಷತಾ ತಡೆಗೆ 150 ಕೋಟಿ ಅನುದಾನ
 
35 ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆ
 
ವೃದ್ಧಾಪ ವೇತನ, ನಿರ್ಗತಿಕ ವಿಧುವಾ ವೇತನದಲ್ಲಿ ಹೆಚ್ಚಳ
 
ರುದ್ರಭೂಮಿಗಳ ಅಗತ್ಯ ಜಮೀನು ಖರೀದಿಗೆ 10 ಕೋಟಿ ಅನುದಾನ
 
ಇಂಧನ ಇಲಾಖೆಗೆ 14,136 ಕೋಟಿ ಮೀಸಲು ಅನುದಾನ
 
ಹವಾಮಾನ, ಸಿಡಿಲು ಮುನ್ನೆಚ್ಚರಿಕೆ ಆ್ಯಪ್‌ಗೆ ಆದ್ಯತೆ
 
 5 ಕೋಟಿ ವೆಚ್ಚದಲ್ಲಿ ಪತ್ರಕರ್ತರ ಭವನ ನಿರ್ಮಾಣ
 
ಅಪಘಾತದಲ್ಲಿ ಮೃತಪಟ್ಟ ಪತ್ರಕರ್ತರಿಗೆ ಪರಿಹಾರ
 
ಎಲ್ಲಾ ಸಾರ್ವಜನಿಕ ಕಟ್ಟಡಗಳಲ್ಲಿ ಮಹಿಳೆಯರಿಗಾಗಿ ಶೌಚಾಲಯ
 
ಆಧಾರ ಸಂಗ್ರಹಣೆಗೆ ಐದು ಹೊಸ ಆ್ಯಪ್‌ಗಳು
 
ಪ್ರತಿ ಶಾಲೆಗೆ 5 ಲಕ್ಷದಂತೆ 5 ಕೋಟಿ ರೂ.ವೆಚ್ಚ
 
ತಿರುಮಲದಲ್ಲಿ 20 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಅತಿಥಿ ಗೃಹ ನಿರ್ಮಾಣ
 
ಸಂಗೊಳ್ಳಿ ರಾಯಣ್ಣ ಪ್ರಾಧೀಕಾರಕ್ಕೆ 260 ಕೋಟಿ ಅನುದಾನ
 
ಹಂತ ಹಂತವಾಗಿ ಸರಕಾರಿ ಪ್ರಾಥಮಿಕ ಪ್ರೌಢ ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ
 
ವನ್ಯಜೀವಿಗಳಿಂದ ಮೃತಪಟ್ಟವರಿಗೆ 2 ಲಕ್ಷ ರೂ.ಪರಿಹಾರ
 
ವಿದ್ಯಾರ್ಥಿನಿಯರಿಗೆ ಪೂರ್ಣ ಶುಲ್ಕ ವಿನಾಯಿತಿ
 
ಗ್ರಾಮೀಣ ಆರೋಗ್ಯ ಸುಧಾರಣೆಗೆ ಕ್ರಮ
 
20 ಕೋಟಿ ರೂ.ವೆಚ್ಚದಲ್ಲಿ ಮಲ್ಟಿ ಕಾರ್ ಪಾರ್ಕಿಂಗ್
 
9 ಸಾವಿರ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳ ಸ್ಥಾಪನೆ
 
ಐಟಿ, ಬಿಟಿ, ವಿಕ್ಷಾನ, ತಂತ್ರಜ್ಞಾನ ಕ್ಷೇತ್ರಕ್ಕೆ 260 ಕೋಟಿ ಅನುದಾನ
 
ಮಾಧ್ಯಮ ಸಂಜೀವಿನಿ ಜೀವ ವಿಮಾ ಯೋಜನೆಯಡಿ ಅಪಘಾತದಲ್ಲಿ ಮೃತಪಟ್ಟ ಪತ್ರಕರ್ತರಿಗೆ 5 ಲಕ್ಷ ಪರಿಹಾರ
 
ವೈಮಾನಿಕ ಇಂಧನ ಮೇಲಿನ ಮಾರಾಟ ತೆರಿಗೆ ಇಳಿಕೆ
 
ಪಾಲಿಕೆ ವತಿಯಿಂದ ಬೆಂಗಲೂರಿನ 40 ಕೆರೆಗಳ ಅಭಿವೃದ್ಧಿ
 
ಮೈಸೂರಿನ ಶುಶ್ರೂಷಾ ಕಾಲೇಜಿಗೆ 30 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ
 
ದೇವದಾಸಿಯರ ಸಬಲಿಕರಣಕ್ಕೆ ಸಾಲ ಮತ್ತು ಸಹಾಯಧನ
 
250 ಅಂಗನವಾಡಿ ಕೇಂದ್ರಗಳ ಸ್ಥಾಪನೆಗೆ ನಿರ್ಧಾರ
 
ಬೆಂಗಳೂರು ಟ್ರಾಫಿಕ್ ಜಾಮ್ ಕಡಿಮೆಗೊಳಿಸಲು ಯೋಜನೆ
 
ಬೆಂಗಳೂರಿನಲ್ಲಿ ಪಾದಚಾರಿ ರಸ್ತೆಗಳ ಅಭಿವೃದ್ಧಿ
 
ಬೆಂಗಳೂರು ನಗರ ಸ್ಮಾರ್ಟ್ ಸಿಟಿ ಯೋಜನೆಗೆ ಪರಿಗಣನೆ
 
110 ಹಳ್ಳಿಗಳ ರಸ್ತೆ ಅಭಿವೃದ್ಧಿ ಯೋಜನೆ
 
ಕೆ.ಆರ್.ಮಾರುಕಟ್ಟೆ ಪ್ರದೇಶ ಪುನಶ್ಚೇತನ
 
ಕಬ್ಬನ ಪಾರ್ಕ್ ಉದ್ಯಾನ ಅಭಿವೃದ್ಧಿ
 
ಹಲಸೂರು ಮತ್ತು ಸ್ಯಾಂಕಿ ಕೆರೆ ಅಭಿವೃದ್ದಿ
 
ಕರಾವಳಿಯಲ್ಲಿ ತೇಲುವ ಉಪಹಾರ ಗೃಹ, ಹೌಸ್‌ಬೋಟ್ 
 
ಪ್ರವಾಸೋದ್ಯಮ ಇಲಾಖೆಗೆ 459 ಕೋಟಿ ಅನುದಾನ
 
ಸ್ವತಂತ್ರಪಾಳ್ಯ ಪ್ರದೇಶ ಅಭಿವೃದ್ಧಿ
 
ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಸ್ಕೂಟರ್ ಖರೀದಿಗೆ ಬಡ್ಡಿ ರಹಿತ ಸಾಲ
 
ಸನ್ನತಿ, ಕಲಬುರಗಿ ಕೋಟಿಗಳ ಅಭಿವೃದ್ಧಿ
 
ವಿಜ್ಞಾನ, ಇಂಜಿನಿಯರಿಂಗ್ ಪಿಎಚ್‌ಡಿ ವಿದ್ಯಾರ್ಥಿಗಳಿಗಾಗಿ 1 ಕೋಟಿ ಅನುದಾನ
 
ಕೂಲಿ ಕಾರ್ಮಿಕರ ಮಕ್ಕಳಿಗಾಗಿ ಸಂಚಾರಿ ಅಂಗನವಾಡಿಗಳು
 
ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ 1017 ಕೋಟಿ ರೂ ಅನುದಾನ
 
ಕಲಬುರಗಿಯಲ್ಲಿ ಪರಂಪರೆ ಬಿಂಬಿಸುವ ಕಲಾಭವನ ನಿರ್ಮಾಣ
 
ಕಲಬುರಗಿಯಲ್ಲಿ ಇನ್‌ಕ್ಯೂಬೇಶನ್ ಕೇಂದ್ರ ನಿರ್ಮಾಣ
 
ಪರಿಶಿಷ್ಠ ಜಾತಿಯ ಯುವತಿ ಬೇರೆ ಜಾತಿಯವನೊಂದಿಗೆ ವಿವಾಹವಾದಲ್ಲಿ 5 ಲಕ್ಷ ಪ್ರೋತ್ಸಾಹ ಧನ
 
ಸಮಾಜ ಕಲ್ಯಾಣ ಕಚೇರಿಯ ಸ್ವಂತ ಕಟ್ಟಡಕ್ಕಾಗಿ 25 ಕೋಟಿ ಅನುದಾನ
 
 ದೇವನಹಳ್ಳಿಯಲ್ಲಿ ಮಹರ್ಷಿ ಅಧ್ಯಯನ ಕೇಂದ್ರ ಸ್ಥಾಪನೆ
 
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಫೆಲೋಶಿಪ್ 10 ಸಾವಿರಕ್ಕೆ ಏರಿಕೆ
 
ಜೈನ್, ಸಿಖ್ ಸಮುದಾಯಗಳ ಅಭಿವೃದ್ಧಿಗೆ 80 ಕೋಟಿ ರೂ.ಹೆಚ್ಚಳ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ