ಕೊರೋನಾ ರೋಗಿಗಳನ್ನು ಕರೆದೊಯ್ಯುವುದೇ ಸಿಬ್ಬಂದಿಗಳಿಗೆ ತಲೆನೋವು

ಶುಕ್ರವಾರ, 17 ಜುಲೈ 2020 (09:09 IST)
ಬೆಂಗಳೂರು: ಕೊರೋನಾ ಪಾಸಿಟಿವ್ ಎಂದು ಬಂದ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವುದೇ ಕೆಲವು ಕಡೆ ಸಿಬ್ಬಂದಿಗಳಿಗೆ ತಲೆನೋವಾಗಿ ಪರಿಣಮಿಸುತ್ತದೆ.


ಇದಕ್ಕೆ ಕಾರಣ ಎಲ್ಲಾ ರೋಗಿಗಳೂ ಸರ್ಕಾರ ವಿಧಿಸಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಹಿಂದೇಟು ಹಾಕುವುದು. ಕೆಲವರು ನಾವು ಮನೆಯಲ್ಲೇ ನಮ್ಮ ವೈದ್ಯರಿಂದಲೇ ಚಿಕಿತ್ಸೆ ಪಡೆದುಕೊಳ್ಳುತ್ತೇವೆ ಎಂದು ಹಠ ಹಿಡಿದರೆ, ಮತ್ತೆ ಕೆಲವರು ಸರ್ಕಾರ ನೀಡುವ ಆಸ್ಪತ್ರೆಗಳು, ಕ್ವಾರಂಟೈನ್ ಕೇಂದ್ರಗಳು ಸರಿಯಿಲ್ಲ ಎಂಬ ಭಾವನೆಯಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ.

ಅವರನ್ನು ಕರೆದೊಯ್ಯದೇ ಇದ್ದರೆ ಅಕ್ಕಪಕ್ಕದವರಿಗೂ ತೊಂದರೆ. ಹೀಗಾಗಿ ಮನ ಒಲಿಸಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಿಬ್ಬಂದಿಗಳು, ಪೊಲೀಸರಿಗೆ ತಲೆನೋವಿನ ಕೆಲಸವಾಗುತ್ತಿದೆ. ವಿಪರ್ಯಾಸವೆಂದರೆ ಇಷ್ಟು ಅಪಾಯಕಾರಿ ಸನ್ನಿವೇಶದಲ್ಲಿ ನಾವಿದ್ದರೂ ವಿದ್ಯಾವಂತರೇ ಹೀಗೆ ಆಡುತ್ತಿದ್ದಾರೆ ಎಂದರೆ ಯಾರನ್ನು ದೂಷಿಸಿ ಏನು ಪ್ರಯೋಜನ?

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ