ಕೋವಿಡ್ ತಡೆಗಟ್ಟಲು ಇಂಡೋನೇಷ್ಯಾದಲ್ಲಿ "ಡೆಲ್ಟಾ ರೋಬೋಟ್" ಪ್ರಯೋಗ

ಸೋಮವಾರ, 16 ಆಗಸ್ಟ್ 2021 (19:47 IST)
ಕೋವಿಡ್ ದಿನೇ ದಿನೇ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಇದೇ ಸಮಯದಲ್ಲಿ ಮನರಂಜನೆಗಾಗಿ ಇಂಡೋನೇಷ್ಯಾದ ಗ್ರಾಮಸ್ಥರು ಮತ್ತು ವಿಜ್ಞಾನಿಗಳು ಮನೆಯಲ್ಲಿ ವಿನ್ಯಾಸಗೊಳಿಸಿದ ರೋಬೋಟ್ ಇದೀಗ ಸಾಂಕ್ರಾಮಿಕ ಸಮಯದಲ್ಲಿ ಕೋವಿಡ್ -19 ಗೆ ತುತ್ತಾದ ನಿವಾಸಿಗಳಿಗೆ ಆಹಾರವನ್ನು ಒದಗಿಸುವುದರ ಜೊತೆಗೆ ಆಶಾದಾಯಕವಾದ ಒಂದು ನಗುವನ್ನು ಕೋವಿಡ್ಗೆ ತುತ್ತಾದವರ ಮುಖದಲ್ಲಿ ತರುತ್ತಿದೆ.

ಮಡಿಕೆಗಳು, ಫ್ಯಾನ್ಗಳು ಹಾಗೂ ಹಳೆಯ ಟೆಲಿವಿಷನ್ ಮಾನಿಟರ್ನಂತಹ ಗೃಹೋಪಯೋಗಿ ವಸ್ತುಗಳಿಂದ ತಯಾರಿಸಿದ ರೋಬೋಟ್ ಅನ್ನು ಇಂಡೋನೇಷ್ಯಾದ ಗ್ರಾಮಸ್ಥರು ಈ ಕೊರೋನಾ ವೈರಸ್ ಸಾಂಕ್ರಾಮಿಕ ರೂಪಾಂತರದ ಅನುಮೋದನೆಯಲ್ಲಿ "ಡೆಲ್ಟಾ ರೋಬೋಟ್" ಎಂದು ಕರೆದಿದ್ದಾರೆ.
"ಕೋವಿಡ್ನ ಹೊಸ ಡೆಲ್ಟಾ ರೂಪಾಂತರ ಮತ್ತು ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳನ್ನು ಗಮನದಲ್ಲಿ ಇಟ್ಟಕೊಂಡು,ನಾನು ರೋಬೋಟ್ ಅನ್ನು ಸಾರ್ವಜನಿಕ ಸೇವೆಗಳಾದ ಕ್ರಿಮಿನಾಶಕ ಸಿಂಪಡಿಸಲು, ಆಹಾರವನ್ನು ತಲುಪಿಸಲು ಮತ್ತು ಸ್ವಯಂ-ಪ್ರತ್ಯೇಕವಾಗಿರುವ ನಿವಾಸಿಗಳ ಅಗತ್ಯಗಳನ್ನು ಪೂರೈಸಲು ಬಳಸಲು ನಿರ್ಧರಿಸಿದೆ" ,ಎಂದು ರೋಬೋಟ್ ಯೋಜನೆಯ ಮುಖ್ಯಸ್ಥರಾಗಿರುವ ನೆರೆಹೊರೆಯ ನಾಯಕ ಆಸೆಯಂಟೋ 53 ತಿಳಿಸಿದ್ದಾರೆ.
ರೋಬೋಟ್ನ ತಲೆಯನ್ನು ರೈಸ್ ಕುಕ್ಕರ್ನಿಂದ ತಯಾರಿಸಲಾಗಿದ್ದು, ಇದನ್ನು 12 ಗಂಟೆಗಳ ಬ್ಯಾಟರಿ ಬಾಳಿಕೆಯೊಂದಿಗೆ ರಿಮೋಟ್ ಕಂಟ್ರೋಲ್ ಮೂಲಕ ನಿರ್ವಹಿಸಲಾಗುತ್ತದೆ. ಟೆಂಬೋಕ್ ಗೆಡೆ ಗ್ರಾಮದಲ್ಲಿ ತಯಾರಿಸಿದ ಹಲವಾರು ರೋಬೋಟ್ಗಳಲ್ಲಿ ಇದೂ ಒಂದು, ಇದು ತಂತ್ರಜ್ಞಾನದ ಸೃಜನಶೀಲ ಬಳಕೆಗಾಗಿ ಖ್ಯಾತಿಯನ್ನು ಗಳಿಸಿದೆ ಎಂದು ರೋಬೋಟ್ ಯೋಜನೆಯ ಪ್ರಮುಖರು ಅಲ್ಲಿನ ಸ್ಥಳೀಯ ಮಾಧ್ಯಗಳಿಗೆ ತಿಳಿಸಿದ್ದಾರೆ.
ಕೋವಿಡ್-19ಗೆ ತುತ್ತಾದ ನಿವಾಸಿಗಳ ಮನೆಗೆ ಈ ರೋಬೋಟ್ ಅನ್ನು ಕಳುಹಿಸಲಾಗುತ್ತದೆ ನಂತರ, ಅದರ ಸ್ಪೀಕರ್ ನಿಂದ "ಅಸ್ಸಲಮುಅಲೈಕುಮ್" (ನಿಮ್ಮೊಂದಿಗೆ ಶಾಂತಿ ಇರಲಿ),ನಂತರ ನಿಮ್ಮ ಡೆಲಿವರಿ ಇಲ್ಲಿದೆ. ಬೇಗ ಗುಣಮುಖರಾಗಿ" ಎಂಬ ಸಂದೇಶವನ್ನು ರೋಬೋಟ್ ಹೊರಡಿಸುತ್ತದೆ ಎಂದು ವರದಿಗಳ ಮೂಲಕ ತಿಳಿದುಬಂದಿದೆ.
ಈ ಗ್ರಾಮವು ಪೂರ್ವ ಜಾವಾ ಪ್ರಾಂತ್ಯದ ರಾಜಧಾನಿ ಮತ್ತು ಇಂಡೋನೇಷ್ಯಾದ ಎರಡನೇ ಅತಿದೊಡ್ಡ ನಗರವಾದ ಸುರಬಯಾದಲ್ಲಿದೆ, ಅಲ್ಲಿ ಕಳೆದ ಒಂದು ತಿಂಗಳಲ್ಲಿ ವಿನಾಶಕಾರಿ ಎರಡನೇ ತರಂಗ ಕೊರೊನಾವೈರಸ್ ಸೋಂಕು ವ್ಯಾಪಿಸಿ ಅಲ್ಲಿನ ಜನ ಜೀವನ ಕಷ್ಟಕರವಾಗಿದೆ. ಇಂಡೋನೇಷ್ಯಾ ಏಷ್ಯಾದಲ್ಲಿ ಕೋವಿಡ್ -19 ಸಾಂಕ್ರಾಮಿಕದ ಕೇಂದ್ರಬಿಂದುವಾಗಿದೆ. ವಿಶಾಲ ದ್ವೀಪಸಮೂಹದಲ್ಲಿ ಹರಡಿರುವ 270 ದಶಲಕ್ಷಕ್ಕೂ ಅಧಿಕ ಜನಸಂಖ್ಯೆಯಲ್ಲಿ 3.68 ದಶಲಕ್ಷಕ್ಕೂ ಹೆಚ್ಚು ಸೋಂಕುಗಳು ಮತ್ತು ವೈರಸ್ನಿಂದ 108,000 ಕ್ಕೂ ಹೆಚ್ಚು ಸಾವುಗಳು ಇಂಡೋನೇಷ್ಯಾದಲ್ಲಿ ದಾಖಲಾಗಿವೆ ಎಂದು ವರದಿಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ