ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಜನಿಸಿದ ಮಕ್ಕಳಲ್ಲಿ ಬುದ್ಧಿಮತ್ತೆ ಕುಂಠಿತ

ಶನಿವಾರ, 14 ಆಗಸ್ಟ್ 2021 (10:47 IST)
Corona Effect on Children: ಮಗುವಿನ ಮೊದಲ 5 ವರ್ಷಗಳು ಮಗುವಿನ ಶೈಕ್ಷಣಿಕ ಅರಿವಿನ ಆಧಾರ ಸ್ತಂಭವಾಗಿದ್ದು ಸಾಂಕ್ರಾಮಿಕದ ಕಾರಣದಿಂದ ನರ್ಸರಿ, ಅಂಗವನಾಡಿ ತರಗತಿಗಳು, ಆಟದ ಮೈದಾನಗಳು ಪ್ರಸ್ತುತ ಮುಚ್ಚಿವೆ. ಇದರಿಂದ ಮಕ್ಕಳ ಶಿಕ್ಷಣ ತೀವ್ರ ಬದಲಾವಣೆ ಕಂಡುಕೊಂಡಿದೆ. ಕೊರೋನಾ ಸಾಂಕ್ರಾಮಿಕ ಕಳೆದ ಎರಡು ವರ್ಷಗಳಿಂದ ನಿರಂತರ ದಾಂಧಲೆ ಮಾಡುತ್ತಿದೆ.

ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಈ ಸಾಂಕ್ರಾಮಿಕವು ಮನುಕುಲವನ್ನು ಕುಗ್ಗಿಸಿದೆ. ಈ ರೋಗ ಇಂದು ಕಡಿಮೆಯಾಗಬಹುದು, ನಾಳೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯನ್ನು ಹುಸಿ ಮಾಡಿ ದಿನದಿಂದ ದಿನಕ್ಕೆ ಬೇರೆ ಬೇರೆ ರೂಪಾಂತರಗಳಿಂದ ದಾಳಿ ನಡೆಸುತ್ತಿದೆ. ಈಗ ಅಮೆರಿಕದ ಅಧ್ಯಯನವೊಂದು ಶಾಕಿಂಗ್ ವಿಚಾರ ತಿಳಿಸಿದ್ದು ಸಾಂಕ್ರಾಮಿಕದ ಸಮಯದಲ್ಲಿ ಜನಿಸುವ ಮಕ್ಕಳು ಕಡಿಮೆ ಅರಿವಿನ ಕಾರ್ಯಕ್ಷಮತೆ ಹೊಂದಿದ್ದು ಮಕ್ಕಳ ಬುದ್ಧಿಮತ್ತೆ ಗಮನಾರ್ಹವಾಗಿ ಇಳಿಕೆಯಾಗಲಿದೆ ಎಂದು ತಿಳಿಸಿದೆ.
ಮಗುವಿನ ಮೊದಲ 5 ವರ್ಷಗಳು ಮಗುವಿನ ಶೈಕ್ಷಣಿಕ ಅರಿವಿನ ಆಧಾರ ಸ್ತಂಭವಾಗಿದ್ದು ಸಾಂಕ್ರಾಮಿಕದ ಕಾರಣದಿಂದ ನರ್ಸರಿ, ಅಂಗವನಾಡಿ ತರಗತಿಗಳು, ಆಟದ ಮೈದಾನಗಳು ಪ್ರಸ್ತುತ ಮುಚ್ಚಿವೆ. ಇದರಿಂದ ಮಕ್ಕಳ ಶಿಕ್ಷಣ ತೀವ್ರ ಬದಲಾವಣೆ ಕಂಡುಕೊಂಡಿದೆ. ಇನ್ನು ಪೋಷಕರ ಮೇಲೆ ಸಣ್ಣ ಮಕ್ಕಳ ಜವಾಬ್ದಾರಿ ಬಿದ್ದಾಗ ತಮ್ಮ ಕೆಲಸ ಹಾಗೂ ಮಕ್ಕಳ ಶಿಕ್ಷಣದ ಜವಾಬ್ದಾರಿ ಸರಿದೂಗಿಸಿಕೊಂಡು ಹೋಗುವಲ್ಲಿ ವಿಫಲರಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ಮಕ್ಕಳಿಗೆ ಮನೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ದೊರೆಯುತ್ತಿರುವುದರಿಂದ ಪೋಷಕರಿಗೆ ಸಂಪೂರ್ಣವಾಗಿ ಮಕ್ಕಳ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಹೊರಗಿನ ಪ್ರಪಂಚದೊಂದಿಗೆ ಕಡಿಮೆ ಸಂವಹನದಿಂದಾಗಿ ಮಕ್ಕಳ ಅರಿವಿನ ಮೌಲ್ಯಮಾಪನ ಕುಂಠಿತಗೊಂಡಿದೆ. ಅದೂ ಅಲ್ಲದೆ ಈ ಕುರಿತು ನಡೆಸಿದ ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದು ಆಘಾತಕಾರಿ ಅಂಶವಾಗಿದೆ ಎಂದು ಬ್ರೌನ್ ವಿಶ್ವವಿದ್ಯಾಲಯದ ಪೀಡಿಯಾಟ್ರಿಕ್ಸ್ (ಸಂಶೋಧನೆ) ಸಹಾಯಕ ಪ್ರಾಧ್ಯಾಪಕ ಸೀನ್ ಡಿಯೋನಿ ತಿಳಿಸಿದ್ದಾರೆ.
ಸಾಂಕ್ರಾಮಿಕದ ಮೊದಲು ಹಿಂದಿನ ದಶಕಗಳ ಮಕ್ಕಳಿಗೆ ಹೋಲಿಸಿದಾಗ 3 ತಿಂಗಳಿನಿಂದ ಹಿಡಿದು 3 ವರ್ಷಗಳ ಮಕ್ಕಳ ಐಕ್ಯೂ ಸ್ಕೋರ್ 100ರ ಆಸುಪಾಸಿನಲ್ಲಿತ್ತು. ಆದರೆ ಸಾಂಕ್ರಾಮಿಕದ ಸಮಯದಲ್ಲಿ ಜನಿಸಿದ ಮಕ್ಕಳ ಐಕ್ಯೂ ಮಟ್ಟ 78ಕ್ಕೆ ಕುಸಿದಿದೆ. ಇದರ ಕುರಿತು ಇನ್ನಷ್ಟು ಸೂಕ್ಷ್ಮ ತನಿಖೆ ನಡೆಸಬೇಕಾಗಿದೆ ಎಂದು ಸೀನ್ ತಿಳಿಸಿದ್ದಾರೆ. ಅಧ್ಯಯನ ತಂಡವು 672 ಮಕ್ಕಳ ಮೇಲೆ ಪ್ರಯೋಗವನ್ನು ನಡೆಸಿದ್ದು ಇದರಲ್ಲಿ ಜುಲೈ 2020ರ ನಂತರ ಜನಿಸಿದ 188 ಮಕ್ಕಳು 2019ರ ಮೊದಲು ಜನಿಸಿದ 308 ಮಕ್ಕಳು ಹಾಗೂ 2019 ಮತ್ತು 2020ರ ನಡುವೆ ಜನಿಸಿದ 176 ಮಕ್ಕಳು ಭಾಗವಹಿಸಿದ್ದರು.
ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಮಕ್ಕಳು ಪೂರ್ಣ ಬೆಳವಣಿಗೆ ಹೊಂದಿದವರಾಗಿದ್ದರು ಮತ್ತು ಯಾವುದೇ ದೈಹಿಕ ನ್ಯೂನತೆ ಹೊಂದಿರಲಿಲ್ಲ. ಕಡಿಮೆ ಆರ್ಥಿಕ ಹಿನ್ನೆಲೆಯಿಂದ ಬಂದವರು ಪರೀಕ್ಷೆಗಳಲ್ಲಿ ಕೆಟ್ಟ ಫಲಿತಾಂಶ ನೀಡಿದ್ದಾರೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ