ಕೊರೋನಾ ವೈರಸ್ ಪತ್ತೆ ಹಚ್ಚುವಲ್ಲಿ ನಾಯಿಗಳು ಪರ್ಫೆಕ್ಟ್!

ಶುಕ್ರವಾರ, 31 ಜುಲೈ 2020 (10:16 IST)
ನವದೆಹಲಿ: ಕೊರೋನಾ ವೈರಸ್ ಪತ್ತೆ ಹಚ್ಚುವಲ್ಲಿ ಮಾನವ ನಿರ್ಮಿತ ಉಪಕರಣಗಳಿಂದಲೂ ನಾಯಿಗಳು ಪರ್ಫೆಕ್ಟ್ ರಿಸಲ್ಟ್ ಕೊಡುತ್ತವೆ ಎಂದು ಜರ್ಮನಿಯ ಅಧ‍್ಯಯನಕಾರರು ಕಂಡುಕೊಂಡಿದ್ದಾರೆ.


ನಾಯಿಗಳು ಶೇ.94 ರಷ್ಟು ನಿಖರವಾಗಿ ಕೊರೋನಾ ವೈರಾಣುಗಳನ್ನು ಪತ್ತೆ ಹಚ್ಚುತ್ತವೆ ಎಂದು ಅಧ್ಯಯನಕಾರರು ಪತ್ತೆ ಮಾಡಿದ್ದಾರೆ. ಸುಮಾರು ಎಂಟು ನಾಯಿಗಳನ್ನು ಇದಕ್ಕೆಂದೇ ತರಬೇತುಗೊಳಿಸಿ ಸಂಶೋಧಕರು ಈ ಸತ್ಯ ಕಂಡುಕೊಂಡಿದ್ದಾರೆ.

ವಾಸನೆ ಗ್ರಹಿಸುವಲ್ಲಿ ನಾಯಿಗಳಷ್ಟು ಸೂಕ್ಷ್ಮ ಜೀವಿಗಳು ಮತ್ತೊಬ್ಬರಿಲ್ಲ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕೊರೋನಾ ವೈರಸ್ ಪತ್ತೆ ಮಾಡಲು ನಾಯಿಗಳನ್ನು ಬಳಕೆ ಮಾಡಬಹುದು ಎಂದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ