ಬೆಂಗಳೂರು: ಕೊರೋನಾ ವೈರಸ್ ಗೆ ಸದ್ಯದಲ್ಲೇ ವ್ಯಾಕ್ಸಿನ್ ಪತ್ತೆ ಮಾಡುವ ಪ್ರಯೋಗಗಳು ಅಂತಿಮ ಹಂತದಲ್ಲಿದೆ. ಒಂದು ವೇಳೆ ವ್ಯಾಕ್ಸಿನ್ ಬಂದರೂ ಸಂಪೂರ್ಣವಾಗಿ ಕೊರೋನಾ ಅಪಾಯ ನಿಲ್ಲಲ್ಲ.
ವ್ಯಾಕ್ಸಿನ್ ಮನುಷ್ಯನ ದೇಹದಲ್ಲಿ ಕೊರೋನಾ ಬರುವ ಸಾಧ‍್ಯತೆಯನ್ನು ಕಡಿಮೆ ಮಾಡಬಹುದಷ್ಟೇ ಹೊರತು, ಸಂಪೂರ್ಣವಾಗಿ ಬಾರದು ಎಂದೇ ಹೇಳಲಾಗದು. ಹೀಗಾಗಿ ವ್ಯಾಕ್ಸಿನ್ ಬಂದರೂ ಮಾಸ್ಕ್, ಸಾಮಾಜಿಕ ಅಂತರ ಮರೆತು ನಡೆದುಕೊಳ್ಳುವಂತಿಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವಿರಲೇ ಬೇಕು.