ಮದ್ಯದಂಗಡಿ ತೆರೆದ ಸರ್ಕಾರದ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಮಂಗಳವಾರ, 5 ಮೇ 2020 (11:39 IST)
ಬೆಂಗಳೂರು: ಲಾಕ್ ಡೌನ್ 3 ಜಾರಿಯಲ್ಲಿರುವಾಗಲೇ ಮದ್ಯದಂಗಡಿ ತೆರೆಯುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.


ಇನ್ನೂ ಕೊರೋನಾ ನಿಯಂತ್ರಣಕ್ಕೆ ಬಂದಿಲ್ಲ. ಅನಗತ್ಯವಾಗಿ ಹೊರಗಡೆ ಓಡಾಡುವಂತಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಮದ್ಯದಂಗಡಿ ತೆರೆಯಲು ಇಷ್ಟು ಅವಸರ ಏಕೆ ಬೇಕಿತ್ತು ಎಂದು ಹಲವರು ಫೇಸ್ ಬುಕ್, ಟ್ವಿಟರ್, ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ.

ಮದ್ಯ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದ ತಕ್ಷಣವೇ ಪಾನಪ್ರಿಯರು ಸಾಮಾಜಿಕ ಅಂತರವನ್ನೂ ಮರೆತು ರಸ್ತೆಗಿಳಿದಿದ್ದರು. ಇದು ಮತ್ತೊಂದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಸರ್ಕಾರಕ್ಕೆ ಅಬಕಾರಿ ಆದಾಯವೇ ಮುಖ್ಯವಾಯಿತೇ? ಒಂದು ಕಡೆ ಕಟ್ಟುನಿಟ್ಟು ಮಾಡಿ ಇನ್ನೊಂದು ಕಡೆ ಲೂಸ್ ಬಿಡುವ ಅಗತ್ಯವೇನಿತ್ತು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ