ಬಾರ್ ಓಪನ್ ಮಾಡಿದ್ರಿ, ದೇವಸ್ಥಾನ ಯಾವಾಗ? ಸದ್ಯದಲ್ಲೇ ಸಿಗಲಿದೆ ಉತ್ತರ

ಮಂಗಳವಾರ, 5 ಮೇ 2020 (09:19 IST)
ಬೆಂಗಳೂರು: ಲಾಕ್ ಡೌನ್ ಜಾರಿಯಲ್ಲಿದ್ದರೂ ನಿನ್ನೆಯಿಂದ ರಾಜ್ಯದಲ್ಲಿ ಮದ್ಯದಂಗಡಿ ಓಪನ್ ಮಾಡಲು ಸರ್ಕಾರ ಅನುವು ಮಾಡಿಕೊಟ್ಟಿದೆ. ಈ ನಡುವೆ ಆಸ್ತಿಕರು ದೇವಾಲಯಗಳ ತೆರವು ಯಾವಾಗ ಎಂದು ಕೇಳುತ್ತಿದ್ದಾರೆ.

 

ಬಾರ್ ಓಪನ್ ಮಾಡಿದ್ರಿ ಹಾಗಿದ್ದ ಮೇಲೆ ದೇವಾಲಯಗಳನ್ನು ಯಾಕೆ ತೆರೆಯಬಾರದು ಎಂದು ಮುಜರಾಯಿ ಇಲಾಖೆಗೆ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನಿಸುತ್ತಿದ್ದಾರೆ.

ಈ ಸಂಬಂಧ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೂಡಾ ಮಾತನಾಡಿದ್ದು, ಎರಡು ದಿನಗಳ ಬಳಿಕ ನಿಬಂಧನೆಗಳೊಂದಿಗೆ ದೇವಾಲಯ ತೆರೆಯುವ ಬಗ್ಗೆ ನಿರ್ಧರಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ದೇವಾಲಯಗಳನ್ನು ತೆರೆಯಲು ಅನುವು ಮಾಡಿಕೊಟ್ಟರೂ ಸದ್ಯದ ಮಟ್ಟಿಗೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡಬೇಕೇ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹೇಗೆ ಎಂಬಿತ್ಯಾದಿ ಬಗ್ಗೆ ಚಿಂತನೆ ನಡೆಸಬೇಕಿದೆ. ಹೀಗಾಗಿ ಈ ಬಗ್ಗೆ ಯೋಚಿಸಿ ನಿರ್ಧರಿಸುವುದಾಗಿ ಸಚಿವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ