ಭಾರತ ತಂಡ ಜಿಂಬಾಬ್ವೆ ವಿರುದ್ಧ ಟಿ 20 ಎರಡನೇ ಪಂದ್ಯದಲ್ಲಿ 10ವಿಕೆಟ್‌ಗಳಿಂದ ಭರ್ಜರಿ ಜಯಗಳಿಸುವ ಮೂಲಕ ಮೊದಲ ಟಿ 20 ಸೋಲಿನ ಸೇಡನ್ನು ತೀರಿಸಿಕೊಂಡಿದೆ. ಇದರಿಂದ ಟಿ 20 ಸರಣಿಯಲ್ಲಿ ಭಾರತ , ಜಿಂಬಾಬ್ವೆ 1-1ರಿಂದ ಸಮವಾಗಿದ್ದು, ಮೂರನೇ ಪಂದ್ಯದ ವಿಜೇತರು ಪ್ರಶಸ್ತಿ ಗೆಲ್ಲಲಿದ್ದಾರೆ.
ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಭಾರತದ ಲೋಕೇಶ್ ರಾಹುಲ್ ಮತ್ತು ಮಂದೀಪ್ ಸಿಂಗ್ ಕೊನೆಯವರೆಗೆ ಉತ್ತಮ ಜತೆಯಾಟವಾಡಿ 13. 1 ಓವರುಗಳಲ್ಲಿ 103 ರನ್ ಮೂಲಕ ಜಿಂಬಾಬ್ವೆ ಗುರಿಯನ್ನು ಸುಲಭವಾಗಿ ಮುಟ್ಟಿದರು. ಮೊದಲ ಏಕದಿನದಲ್ಲಿ ಮೊದಲ ಎಸೆತದಲ್ಲೇ ಔಟಾಗಿದ್ದ ರಾಹುಲ್ ಈ ಬಾರಿ 40 ಎಸೆತಗಳಲ್ಲಿ 47 ಅತ್ಯಮೂಲ್ಯ ರನ್‌ಗಳನ್ನು ಮತ್ತು ಮಂದೀಪ್ ಸಿಂಗ್ 40 ಎಸೆತಕ್ಕೆ 52 ರನ್ ಬಿರುಸಿನ ಸ್ಕೋರ್ ಮಾಡಿದರು.