ಸಿಎಸ್‌ಕೆಯನ್ನು ಹಿಂದಿಕ್ಕಿದ ಅತ್ಯಂತ ಮೌಲ್ಯಯುತ ತಂಡವಾಗಿ ಹೊರಹೊಮ್ಮಿದ ಆರ್‌ಸಿಬಿ

Sampriya

ಮಂಗಳವಾರ, 8 ಜುಲೈ 2025 (19:49 IST)
Photo Credit X
18 ವರ್ಷದ ಬಳಿಕ ಐಪಿಎಲ್‌ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡ ಆರ್‌ಸಿಬಿ  ಇದೀಗ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಹಿಂದೆಹಾಕಿ ಅತ್ಯಂತ ಮೌಲ್ಯಯುತ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. 

ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಋತುವಿನ ಚೊಚ್ಚಲ ಪ್ರಶಸ್ತಿಯನ್ನು ಗೆದ್ದ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಹಿಂದಿಕ್ಕಿದೆ. 

IPLನ ವ್ಯಾಪಾರದ ಮೌಲ್ಯಮಾಪನವು $18.5 ಶತಕೋಟಿಗೆ ಏರಿತು, ಇದು ವಿಶ್ವದ ಅತ್ಯಂತ ಮೌಲ್ಯಯುತವಾದ ಕ್ರೀಡಾ ಲೀಗ್‌ಗಳಲ್ಲಿ ಸ್ಥಾನ ಪಡೆದಿದೆ.

ಹೌಲಿಹಾನ್ ಲೋಕೆಯವರ ಇತ್ತೀಚಿನ ಬ್ರ್ಯಾಂಡ್ ಮೌಲ್ಯಮಾಪನ ವರದಿಯ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತ್ಯಂತ ಮೌಲ್ಯಯುತ ಫ್ರಾಂಚೈಸ್ ಆಗಿದೆ.

ಅಂಬಾನಿ ಕುಟುಂಬ ಒಡೆತನದ ಮುಂಬೈ ಇಂಡಿಯನ್ಸ್ ಮೌಲ್ಯ ₹2073 ಕೋಟಿಗೆ ಏರಿಕೆಯಾಗಿದ್ದು ಮೌಲ್ಯಯುತ ತಂಡಗಳಲ್ಲಿ ಎರಡನೇ ಸ್ಥಾನದಲ್ಲಿದೆ. 2025ರ ಐಪಿಎಲ್‌ನಲ್ಲಿ ನಿರಾಶಾದಾಯಕ ಆಟವಾಡಿದ ಇಂಡಿಯಾ ಸಿಮೆಂಟ್ಸ್ ಮಾಲೀಕತ್ವದ ಸಿಎಸ್‌ಕೆ ತಂಡ ಮೂರನೇ ಸ್ಥಾನಕ್ಕೆ ಸರಿದಿದೆ. ಇದರ ಮೌಲ್ಯ ₹2013 ಕೋಟಿಗೆ ಇಳಿದಿದೆ. ಶಾರೂಕ್‌ ಖಾನ್ ಒಡೆತನದ ಕೋಲ್ಕತ್ತ ನೈಟ್‌ ರೈಡರ್ಸ್‌ (₹1945 ಕೋಟಿ) ನಾಲ್ಕನೇ ಸ್ಥಾನದಲ್ಲಿದೆ. ಸನ್‌ರೈಸರ್ಸ್‌ (₹1319 ಕೋಟಿ) ಹೈದರಾಬಾದ್, ಪಂಜಾಬ್‌ ಕಿಂಗ್ಸ್‌ (₹1,208 ಕೋಟಿ) ನಂತರದ ಸ್ಥಾನಗಳಲ್ಲಿವೆ. ಇವುಗಳಲ್ಲಿ ಪಂಜಾಬ್‌ ಆರ್ಥಿಕವಾಗಿ ಅತಿ ಹೆಚ್ಚಿನ ಬೆಳವಣಿಗೆ (ಶೇ 39.6) ಕಂಡಿದೆ.

‘ಫ್ರಾಂಚೈಸಿಗಳ ಮೌಲ್ಯ ಸಾಕಷ್ಟು ಏರಿಕೆಯಾಗಿದೆ. ಮಾಧ್ಯಮ ಪ್ರಸಾರ ಹಕ್ಕು ಒಪ್ಪಂದ ದಾಖಲೆ ಮಟ್ಟಕ್ಕೆ ಏರಿದೆ. ಬ್ರಾಂಡ್‌ ಒಪ್ಪಂದಗಳೂ ಇದಕ್ಕೆ ಕಾಣಿಕೆ ನೀಡಿವೆ’ ಎಂದು ಬ್ಯಾಂಕ್‌ನ ಆರ್ಥಿಕ ಮತ್ತು ವ್ಯಾಲ್ಯೂಯೇಷನ್‌ ಅಡ್ವೈಸರಿಯ ನಿರ್ದೇಶಕ ಹರ್ಷ ತಾಳಿಕೋಟೆ ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ