ಅಜಿಂಕ್ಯಾ ರಹಾನೆ ಶತಕ: ಭಾರತ 500ಕ್ಕೆ 9 ವಿಕೆಟ್ ಡಿಕ್ಲೇರ್ಡ್

ಮಂಗಳವಾರ, 2 ಆಗಸ್ಟ್ 2016 (10:34 IST)
ಅಜಿಂಕ್ಯ ರಹಾನೆ ಏಳನೇ ಶತಕ ಪೂರ್ಣಗೊಳಿಸಿದರು ಮತ್ತು ರೊಸ್ಟೊನ್ ಚೇಸ್ ತಮ್ಮ ಮೊದಲ ಐದು ವಿಕೆಟ್ ಕಬಳಿಸಿದರು. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಲ್ಲಿ ನಡೆಯುತ್ತಿರುವ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 196 ರನ್ ಸ್ಕೋರಿಗೆ ಉತ್ತರವಾಗಿ ಭಾರತ 9 ವಿಕೆಟ್‌ಗೆ 500 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.

ಟೀ ವಿರಾಮದ ಬಳಿಕ ಸತತವಾಗಿ ಬಿದ್ದ ಮಳೆಯಿಂದ ಯಾವುದೇ ಆಟ ನಡೆಯಲಿಲ್ಲ. ವೆಸ್ಟ್ ಇಂಡೀಸ್ ಈಗ  ತಮ್ಮ ಎರಡನೇ ಇನ್ನಿಂಗ್ಸ್ ಆರಂಭದಲ್ಲಿ 304 ರನ್ ಕೊರತೆ ಅನುಭವಿಸಿದೆ. ಭಾರತದ ಮನೋಜ್ಞ ಬ್ಯಾಟಿಂಗ್ ಪ್ರದರ್ಶನದಿಂದ ಪ್ರವಾಸಿಗಳು ಸಂಪೂರ್ಣ ಹಿಡಿತ ಸಾಧಿಸಿ ಜಯದೊಂದಿಗೆ 2-0 ಮುನ್ನಡೆ ಗಳಿಸುವ ಸನ್ನಾಹದಲ್ಲಿದೆ.
 
  9ನೇ ವಿಕೆಟ್ ಪತನದ ಬಳಿಕ ವಿರಾಟ್ ಕೊಹ್ಲಿ ಡಿಕ್ಲೇರ್ ಘೋಷಿಸಿದರು. ಉಮೇಶ್ ಯಾದವ್ ಚೇಸ್ ಬೌಲಿಂಗ್‌ನಲ್ಲಿ ವೆಸ್ಟ್ ಇಂಡೀಸ್ ನಾಯಕ ಹೋಲ್ಡರ್‌ಗೆ ಮಿಡ್‌ವಿಕೆಟ್‌ನಲ್ಲಿ ಕ್ಯಾಚಿತ್ತು ಔಟಾದರು. ಚೇಸ್ ಕೇವಲ ತಮ್ಮ ಎರಡನೇ ಟೆಸ್ಟ್ ಪಂದ್ಯದಲ್ಲಿ 36.1 ಓವರುಗಳಲ್ಲಿ 121 ರನ್ ನೀಡಿ 5 ವಿಕೆಟ್ ಕಬಳಿಸಿದರು.
 
ರಹಾನೆ 65 ರನ್‌ಗಳಾಗಿದ್ದಾಗ ಬಿಶೂ ಬೌಲಿಂಗ್‌ನಲ್ಲಿ ನೀಡಿದ ಕ್ಯಾಚ್ ಡ್ರಾಪ್ ಮಾಡಿದ್ದರಿಂದ ಜೀವದಾನ ಪಡೆದರು. ವೃದ್ಧಿಮಾನ್ ಸಹಾ ಜತೆ 6ನೇ ವಿಕೆಟ್‌ಗೆ 98 ರನ್ ಕಲೆಹಾಕಿದರು. ಸಹಾ ಹೋಲ್ಡರ್‌ಗೆ 46 ರನ್‌ಗಳಾಗಿದ್ದಾಗ ಎಲ್‌ಬಿಡಬ್ಲ್ಯುಗೆ ಬಲಿಯಾದರು.
 2 ಬಾರಿ ಮಳೆಯಿಂದ ಅಡ್ಡಿಯಾದ ಸೆಷನ್‌ನಲ್ಲಿ ಚೇಸ್ ಅಮಿತ್ ಮಿಶ್ರಾ ಮತ್ತು ಶಮಿಯನ್ನು ಸತತ ಎರಡು ಎಸೆತಗಳಲ್ಲಿ ಔಟ್  ಮಾಡಿದರು. ಆದರೆ ಉಮೇಶ್ ಯಾದವ್ ಚೇಸ್‌ಗೆ ಹ್ಯಾಟ್ರಿಕ್ ವಿಕೆಟ್ ಸಿಗುವುದನ್ನು ತಪ್ಪಿಸಿದರು. ಕೆಳಕ್ರಮಾಂಕದ ಯಾದವ್ ತಮ್ಮ 19 ರನ್ ಸ್ಕೋರಿನಲ್ಲಿ 4 ಬೌಂಡರಿಗಳನ್ನು ಸಿಡಿಸಿ ಚೇಸ್‌ಗೆ ಔಟಾದ ಬಳಿಕ ಇನ್ನಿಂಗ್ಸ್ ಡಿಕ್ಲೇರ್ ಮಾಡಲಾಯಿತು.
ಭಾರತ ಮೊದಲ ಇನ್ನಿಂಗ್ಸ್ 500ರನ್‌ಗೆ 9 ವಿಕೆಟ್
ಸ್ಕೋರು ವಿವರ
ಲೋಕೇಶ್ ರಾಹುಲ್ 158, ಪೂಜಾರಾ 46, ವಿರಾಟ್ ಕೊಹ್ಲಿ 44, ಅಜಿಂಕ್ಯ ರಹಾನೆ ಅಜೇಯ 108, ವೃದ್ಧಿಮಾನ್ ಸಹಾ 47
ವಿಕೆಟ್ ಪತನ
87-1 (ಶಿಖರ್ ಧವನ್, 19.3), 208-2 (ಚೇತೇಶ್ವರ ಪೂಜಾರ, 72.2), 277-3 (ಲೋಕೇಶ್ ರಾಹುಲ್, 95.4), 310-4 (ವಿರಾಟ್ ಕೊಹ್ಲಿ, 103.3), 327-5 (ರವಿಚಂದ್ರನ್ ಅಶ್ವಿನ್, 112.1), 425-6 (ವೃದ್ಧಿಮಾನ್ ಸಹಾ, 151.4), 458-7 (ಅಮಿತ್ ಮಿಶ್ರಾ 163.4), 458-8 (ಮೊಹಮ್ಮದ್ ಶಮಿ, 163.5), 500-9 (ಉಮೇಶ್ ಯಾದವ್, 171.1)
 ಬೌಲಿಂಗ್ ವಿವರ
ರೋಸ್ಟೊನ್ ಚೇಸ್ 5 ವಿಕೆಟ್, ಬಿಶೂ 1 ವಿಕೆಟ್, ಹೋಲ್ಡರ್ 1 ವಿಕೆಟ್, ಗೇಬ್ರಿಯಲ್ 1 ವಿಕೆಟ್.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ