IND vs ENG: ಬುಮ್ರಾಗೆ ಹೆದರಲ್ಲ ಎಂದಿದ್ದ ಇಂಗ್ಲೆಂಡ್, 5 ವಿಕೆಟ್ ಕಿತ್ತು ತೋರಿಸಿದ ವೇಗಿ
ಅಪ್ಪಟ ಬ್ಯಾಟಿಂಗ್ ಪಿಚ್ ನಲ್ಲಿ ಎರಡೂ ತಂಡದ ಬೌಲರ್ ಗಳು ವಿಕೆಟ್ ಕೀಳಲು ಪರದಾಡಿದ್ದಾರೆ. ಮೊದಲ ಇನಿಂಗ್ಸ್ ಭಾರತ 471 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಈಗ 465 ರನ್ ಗಳಿಗೆ ಆಲೌಟ್ ಆಗಿದೆ. ಈ ಮೂಲಕ 6 ರನ್ ಗಳ ಮೊದಲ ಇನಿಂಗ್ಸ್ ಹಿನ್ನಡೆ ಅನುಭವಿಸಿದೆ.
ಒಂದು ಹಂತದಲ್ಲಿ ಇಂಗ್ಲೆಂಡ್ ಮುನ್ನಡೆ ಸಾಧಿಸಬಹುದೇನೋ ಅನಿಸಿತ್ತು. ಆದರೆ ಭಾರತಕ್ಕೆ ಮೊದಲ ಓವರ್ ನಿಂದ ಕೊನೆಯ ಓವರ್ ವರೆಗೂ ಪರಿಣಾಮಕಾರಿ ಬೌಲಿಂಗ್ ಮಾಡಿ ನೆರವಾಗಿದ್ದು ಜಸ್ಪ್ರೀತ್ ಬುಮ್ರಾ. ಇಂಗ್ಲೆಂಡ್ ಪ್ರಮುಖ 5 ವಿಕೆಟ್ ಕಿತ್ತ ಬುಮ್ರಾ ತಾವು ಎಂಥಾ ಕ್ಲಾಸ್ ಬೌಲರ್ ಮತ್ತು ಭಾರತ ತಂಡದ ಅವಿಭಾಜ್ಯ ಅಂಗ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಇಂಗ್ಲೆಂಡ್ ಪರ ಒಲಿ ಪಾಪ್ ಶತಕ ಗಳಿಸಿದರೆ ಹ್ಯಾರಿ ಬ್ಯೂಕ್ 99 ರನ್ ಗಳಿಗೆ ಔಟಾಗುವ ಮೂಲಕ ಶತಕ ವಂಚಿತರಾದರು. ಉಳಿದಂತೆ ಭಾರತದ ಪರ ಪ್ರಸಿದ್ಧ ಕೃಷ್ಣ 3, ಮೊಹಮ್ಮದ್ ಸಿರಾಜ್ 2 ವಿಕೆಟ್ ಕಬಳಿಸಿದರು. ಉಳಿದಂತೆ ಶ್ರಾದ್ಧೂಲ್ ಠಾಕೂರ್, ರವೀಂದ್ರ ಜಡೇಜಾಗೆ ವಿಕೆಟ್ ದಕ್ಕಲಿಲ್ಲ.