2ನೇ ಟೆಸ್ಟ್: ಪಾಕಿಸ್ತಾನವನ್ನು ಮಣಿಸಿದ ಇಂಗ್ಲೆಂಡ್, 1-1 ರಿಂದ ಸಮ

ಮಂಗಳವಾರ, 26 ಜುಲೈ 2016 (11:03 IST)
ಜೇಮ್ಸ್ ಆ್ಯಂಡರ್‌ಸನ್ ಮೂರು ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ಎರಡನೇ ಟೆಸ್ಟ್ ಪಂದ್ಯದಲ್ಲಿ  ಪಾಕಿಸ್ತಾನದ ವಿರುದ್ಧ 330 ರನ್ ಭಾರೀ ಮೊತ್ತದ ಅಂತರದಿಂದ ಜಯಗಳಿಸಿದೆ. ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಜಯಕ್ಕೆ 565 ರನ್ ಬೃಹತ್ ಮೊತ್ತ ಬೇಕಾಗಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕನೇ ದಿನ ಟೀ ವಿರಾಮದ ನಂತರ 234 ರನ್‌ಗಳಿಗೆ ಪಾಕಿಸ್ತಾನ ಆಲೌಟ್ ಆಯಿತು.

ಇದು ರನ್‌ಗಳಿಗೆ ಸಂಬಂಧಿಸಿದಂತೆ ಇಂಗ್ಲೆಂಡ್‌ನ ಅತೀ ದೊಡ್ಡ ಜಯ. ಆದರೆ ನಾಲ್ಕು ಟೆಸ್ಟ್ ಸರಣಿಯನ್ನು 1-1ರಿಂದ ಡ್ರಾಮಾಡಿಕೊಂಡ ಸಂತೋಷಕ್ಕೆ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಎರಡನೇ ಸೆಷನ್‍‌ನಲ್ಲಿ ಗಾಯಗೊಂಡಿದ್ದು ಅಡ್ಡಿಯಾಯಿತು. ಇಂಗ್ಲೆಂಡ್‌ನ ಬೃಹತ್ 589 ರನ್ ಸ್ಕೋರಿನಲ್ಲಿ ಟೆಸ್ಟ್‌ನ ಶ್ರೇಷ್ಟ 254 ರನ್ ಸಿಡಿಸಿದ ಜೋಯ್ ರೂಟ್ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಪಾತ್ರರಾದರು.
 
 ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಇಬ್ಬರು ಹಿರಿಯ ಬ್ಯಾಟ್ಸ್‌ಮನ್‌ಗಳು ಜತೆಯಾಗಿ ಒಂದು ವಿಕೆಟ್‌ಗೆ 173ರನ್‌ಗೆ ಇಂಗ್ಲೆಂಡ್ ಡಿಕ್ಲೇರ್ ಮಾಡಿಕೊಂಡಿತು. ಕುಕ್ 76 ರನ್ ಗಳಿಸಿದ್ದು ಉಪನಾಯಕ ರೂಟ್ ಅಜೇಯ 71 ರನ್ ಗಳಿಸಿದರು.
 ಆಂಡರ್‌ಸನ್ ಭುಜದ ಗಾಯದಿಂದ ಚೇತರಿಸಿಕೊಂಡು ಎರಡನೇ ಟೆಸ್ಟ್‌ಗೆ ಮರಳಿದ್ದು, ಶಾನ್ ಮಸೂದ್ ಮತ್ತು ಅಜರ್ ಅಲಿ ವಿಕೆಟ್ ಕಬಳಿಸಿದರು.

 ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 171ಕ್ಕೆ 1 ವಿಕೆಟ್
ಅಲಸ್ಟೈರ್ ಕುಕ್ ನಾಟೌಟ್ 76 ಅಲೆಕ್ಸ್ ಹೇಲ್ಸ್ 24, ಜೋಯ್ ರೂಟ್ 71 ರನ್
ಬೌಲಿಂಗ್ ವಿವರ
ಮೊಹಮ್ಮದ್ ಅಮೀರ್ 1 ವಿಕೆಟ್
ಪಾಕಿಸ್ತಾನ 2ನೇ ಇನ್ನಿಂಗ್ಸ್  234ಕ್ಕೆ ಆಲೌಟ್, ಇಂಗ್ಲೆಂಡ್‌ಗೆ 330 ರನ್‌ಗಳ ಜಯ
ಮೊಹಮ್ಮದ್ ಹಫೀಜ್ 42,  ಯೂನಿಸ್ ಖಾನ್ 28, ಮಿಸ್ಬಾ ಉಲ್ ಹಕ್ 35, ಅಸದ್ ಶಫೀಕ್ 39, ಮೊಹಮ್ಮದ್ ಅಮೀರ್ 29 
 ವಿಕೆಟ್ ಪತನ
7-1 (ಶಾನ್ ಮಸೂದ್, 4.3), 25-2 (ಅಝರ್ ಅಲಿ, 10.2), 83-3 (ಮೊಹಮ್ಮದ್ ಹಫೀಜ್, 25.3), 102-4 (ಯೂನಿಸ್ ಖಾನ್, 31.3), 145-5 (ಮಿಸ್ಬಾ ಉಲ್ ಹಕ್, 45.5), 163-6 (ಸರ್‌ಫ್ರಾಜ್ ಅಹ್ಮದ್, 49.3), 167-7 (ಅಸದ್ ಶಫೀಕ್, 50.2), 190-8 (ಯಾಸಿರ್ ಶಾ 58.4), 208-9 (ವಹಾಬ್ ರಿಯಾಜ್, 63.2), 234-10 (ಮೊಹಮ್ಮದ್ ಅಮೀರ್, 70.3)
 ಬೌಲಿಂಗ್ ವಿವರ
ಆಂಡರ್‌ಸನ್ 3 ವಿಕೆಟ್, ಕ್ರಿಸ್ ವೋಕ್ಸ್ 3 ವಿಕೆಟ್, ಜೋಯ್ ರೂಟ್  1 ವಿಕೆಟ್ 
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 
 

ವೆಬ್ದುನಿಯಾವನ್ನು ಓದಿ