2ನೇ ಟೆಸ್ಟ್: ಇನ್ನಿಂಗ್ಸ್ ಸೋಲಿನ ಸುಳಿಯಲ್ಲಿ ವೆಸ್ಟ್ ಇಂಡೀಸ್

ಬುಧವಾರ, 3 ಆಗಸ್ಟ್ 2016 (11:19 IST)
ಜಮೈಕಾದ ಸಬೀನಾ ಪಾರ್ಕ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ 48 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದೆ. ಮಳೆಯಿಂದಾಗಿ ನಾಲ್ಕನೇ ದಿನದಾಟ ಸ್ಥಗಿತಗೊಂಡಿದ್ದು, ಎರಡನೇ ಸತತ ಇನ್ನಿಂಗ್ಸ್ ಸೋಲನ್ನು ತಪ್ಪಿಸಲು ವಿಂಡೀಸ್ ಇನ್ನೂ 256 ರನ್ ಗಳಿಸಬೇಕಿದೆ.
 
ಭಾರತ ಮಳೆಯಿಂದಾಗಿ ಕಳೆದುಕೊಂಡ ಸಮಯವನ್ನು ತುಂಬಲು ವೈವಿಧ್ಯಮಯ ದಾಳಿಯನ್ನು ಮಾಡಿ ವೆಸ್ಟ್ ಇಂಡೀಸ್ ಬ್ಯಾಟಿಂಗ್ ದೌರ್ಬಲ್ಯವನ್ನು ಹೊರಗೆಳೆಯಿತು. ಮೊದಲಿಗೆ ರಾಜೇಂದ್ರ ಚಂದ್ರಿಕಾ ಇಶಾಂತ್ ಶರ್ಮಾ ಅವರ ಬೌನ್ಸ್ ಎಸೆತವನ್ನು ಆಡಲು ಯತ್ನಿಸಿದಾಗ ಬಲಮೊಣಕೈಗೆ ಸ್ಪರ್ಶಿಸಿ ಸ್ಟಂಪ್ ಉರುಳಿಸಿತು.
 
ಬ್ರಾತ್‌ವೈಟ್ ಮತ್ತು ಹೊಸ ಬ್ಯಾಟ್ಸ್‌ಮನ್ ಬ್ರೇವೋ  ಶರ್ಮಾ ಮತ್ತು ಶಮಿ ಅವರ ಶಾರ್ಟ್ ಪಿಚ್ ಎಸೆತಗಳನ್ನು ಆಡಲು ತಿಣುಕಾಡಿದರು. ಇನ್ನೊಂದು ಕೊನೆಯಲ್ಲಿ ಅಮಿತ್ ಮಿಶ್ರಾ ಅವರ ಲೆಗ್ ಸ್ಪಿನ್ ಎಸೆತವನ್ನು ಆಡಲು ಯತ್ನಿಸಿದ ಬ್ರಾತ್‌ವೈಟ್‌ ಲೋಕೇಶ್ ರಾಹುಲ್‌ಗೆ ಕ್ಯಾಚಿತ್ತು ಔಟಾದರು. 
 
ಐದು ವಿಕೆಟ್ ಕಬಳಿಸಿದ ರೋಸ್ಟನ್ ಚೇಸ್ ಅವರು ಕ್ರೀಸ್‌ನಲ್ಲಿ ಬ್ಲಾಕ್‌ವುಡ್ ಜತೆ ಸೇರಲಿದ್ದಾರೆ. ಆದಾಗ್ಯೂ ವಿರಾಮದ ಬಳಿಕ ಆರಂಭವಾದ ಮಳೆಯಿಂದ ಆಟದ ಮರುಆರಂಭವನ್ನು ತಪ್ಪಿಸಿದ್ದು, ಅಂತಿಮ ದಿನವೂ ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯಾದರೆ ಇನ್ನೊಂದು ಇನ್ನಿಂಗ್ಸ್ ಸೋಲನ್ನು ತಪ್ಪಿಸಬಹುದು ಎಂಬ ಆಶಾಭಾವನೆ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳಿಗೆ ಚಿಗುರಿದೆ.
 
 ಭಾರತ ಮೊದಲ ಇನ್ನಿಂಗ್ಸ್  500ಕ್ಕೆ 9 ವಿಕೆಟ್ ಡಿಕ್ಲೇರ್ಡ್
 ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ 196ಕ್ಕೆ ಆಲೌಟ್
ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್ 
48ಕ್ಕೆ ನಾಲ್ಕು ವಿಕೆಟ್
5-1 (ರಾಜೇಂದ್ರ ಚಂದ್ರಿಕಾ, 2.3), 41-2 (ಕ್ರೈಗ್ ಬ್ರಾಥ್ವೈಟ್, 12.6), 41-3 (ಮರ್ಲಾನ್ ಸ್ಯಾಮುಯೆಲ್ಸ್, 13.5), 48-4 (ಡ್ಯಾರೆನ್ ಬ್ರಾವೊ, 15.5)
ಬೌಲಿಂಗ್ ವಿವರ 
ಇಶಾಂತ್ ಶರ್ಮಾ 1 ವಿಕೆಟ್, ಶಮಿ 2 ವಿಕೆಟ್, ಅಮಿತ್ ಮಿಶ್ರಾ 1 ವಿಕೆಟ್ 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ