ಪಂದ್ಯದ ನಡುವೆ ಕ್ರಿಕೆಟಿಗರು, ಪ್ರೇಕ್ಷಕರು ಕಿವಿಗೆ ಈ ಸಾಧನವನ್ನು ಏಕೆ ಹಾಕಿಕೊಳ್ಳುತ್ತಿದ್ದಾರೆ

Krishnaveni K

ಶನಿವಾರ, 5 ಜುಲೈ 2025 (10:01 IST)
Photo Credit: X
ಎಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ನಡುವೆ ಆಟಗಾರರು, ಪ್ರೇಕ್ಷಕರು ಕಿವಿಗೆ ಕೆಂಪು ಬಣ್ಣದ ಇಯರ್ ಬಡ್ಸ್ ನಂತಹ ವಸ್ತು ಹಾಕಿಕೊಂಡಿರುವುದನ್ನು ನೋಡಿರಬಹುದು. ಅಷ್ಟಕ್ಕೂ ಈ ಸಾಧನ ಏನು, ಯಾಕೆ ಹಾಕಿಕೊಳ್ಳುತ್ತಿದ್ದಾರೆ ನೋಡಿ.

ಪೆವಿಲಿಯನ್ ನಲ್ಲಿ ಕುಳಿತಿರುವ ಎರಡೂ ತಂಡಗಳ ಆಟಗಾರರು, ಮೈದಾನದಲ್ಲಿರುವ ಕೆಲವು ಪ್ರೇಕ್ಷಕರೂ ಕೆಂಪು ಬಣ್ಣದ ವಯರ್ ಲೆಸ್ ಸಾಧನವನ್ನು ಕಿವಿಗೆ ಹಾಕಿಕೊಂಡಿರುತ್ತಾರೆ. ಮೊದಲ ಟೆಸ್ಟ್ ಪಂದ್ಯದಲ್ಲೂ ಇಂತಹದ್ದೇ ದೃಶ್ಯ ಕಂಡುಬಂದಿತ್ತು.

ಅಷ್ಟಕ್ಕೂ ಇದು ಏನು, ಯಾಕೆ ಹಾಕಿಕೊಳ್ಳುತ್ತಿದ್ದಾರೆ ಎಂಬ ಕುತೂಹಲವೇ? ಇದು ವಯರ್ ಲೆಸ್ ರೇಡಿಯೋ ಆಗಿದ್ದು, ಕ್ರಿಕೆಟಿಗರು, ಕ್ರಿಕೆಟ್ ಪ್ರೇಮಿಗಳು ಪಂದ್ಯ ನಡೆಯುವಾಗ ಕಾಮೆಂಟರಿ ಕೇಳಲು ಇದನ್ನು ಹಾಕಿಕೊಂಡಿರುತ್ತಾರೆ.

ಇದರಿಂದ ಈಗ ಏನು ನಡೆಯುತ್ತಿದೆ, ಏನು ಮಾಡಬಹುದು ಎಂದು ಕ್ರಿಕೆಟಿಗರಿಗೂ ಅಮೂಲ್ಯ ಸಲಹೆಗಳು ಸಿಗುತ್ತವೆ. ಆ ಕಾರಣಕ್ಕೆ ಕ್ರಿಕೆಟಿಗರು ಕಿವಿಯಲ್ಲಿ ಇದನ್ನು ಸಿಕ್ಕಿಸಿಕೊಂಡಿರುತ್ತಾರೆ. ಇನ್ನು ಪಂದ್ಯ ನೋಡುವ ಪ್ರೇಕ್ಷಕರೂ ಆಟಗಾರರ ಸ್ಕೋರ್ ಇತ್ಯಾದಿ ತಿಳಿದುಕೊಳ್ಳಲು ಈ ವಯರ್ ಲೆಸ್ ರೇಡಿಯೋ ಕಿವಿಗೆ ಸಿಕ್ಕಿಸಿಕೊಂಡಿರುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ