IND vs ENG: ವೈಸ್ ಕ್ಯಾಪ್ಟನ್ಸಿ ಪಟ್ಟ ರಿಷಭ್ ಪಂತ್ ಗೆ ಕೆಲಸ ಮಾಡಲು ಕೆಎಲ್ ರಾಹುಲ್

Krishnaveni K

ಶನಿವಾರ, 5 ಜುಲೈ 2025 (15:13 IST)
Photo Credit: X
ಎಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಉಪನಾಯಕನಾಗಿರುವುದು ರಿಷಭ್ ಪಂತ್. ಆದರೆ ಆ ಕೆಲಸ ಮಾಡುತ್ತಿರುವುದು ಕೆಎಲ್ ರಾಹುಲ್.

ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಇದು ಮತ್ತೊಮ್ಮೆ ಪ್ರೂವ್ ಆಗಿದೆ. ಟೀಂ ಇಂಡಿಯಾ ನಾಯಕನಾಗಿ ಶುಭಮನ್ ಗಿಲ್ ಇದ್ದರೆ ಅವರಿಗೆ ಉಪನಾಯಕನಾಗಿರುವ ರಿಷಭ್ ಪಂತ್ ಅಗತ್ಯ ಬಂದಾಗ ಸಲಹೆ ನೀಡಿ ನಾಯಕನಿಗೆ ನೆರವಾಗಬೇಕು. ನಾಯಕ ಮೈದಾನದಿಂದ ಹೊರ ನಡೆದಾಗ ಉಪನಾಯಕನ ಜವಾಬ್ಧಾರಿ ಹೊರಬೇಕು.

ಆದರೆ ಟೀಂ ಇಂಡಿಯಾದಲ್ಲಿ ಈಗ ಪಟ್ಟ ರಿಷಭ್ ಪಂತ್ ಗೆ ಆದರೆ ಕೆಲಸ ಮಾಡಲು ಮಾತ್ರ ಕೆಎಲ್ ರಾಹುಲ್ ಎಂಬಂತಾಗಿದೆ. ಶುಭಮನ್ ಗಿಲ್ ಮೈದಾನದಿಂದ ಕೆಲವು ಕ್ಷಣ ಹೊರನಡೆದಾಗ ಫೀಲ್ಡಿಂಗ್ ಸೆಟ್ ಮಾಡುವುದೆಲ್ಲಾ ಕೆಎಲ್ ರಾಹುಲ್ ಎಂದು ಕಂಡುಬಂದಿದೆ.

ತಂಡಕ್ಕೆ ಪೆಪ್ ಟಾಕ್ ನೀಡುವುದು ಕೆಎಲ್ ರಾಹುಲ್. ಬೌಲರ್ ಗಳಿಗೂ ಸಲಹೆ ನೀಡುವುದು ರಾಹುಲ್. ಹೀಗಾಗಿ ನೆಟ್ಟಿಗರು ನಿಜವಾಗಿ ಉಪ ನಾಯಕ ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ರಾಹುಲ್ ತಂಡದ ಅನಧಿಕೃತ ಕ್ಯಾಪ್ಟನ್ ಎಂದು ಕೊಂಡಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ