ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್ ಹೀರೊ ರೋಸ್ಟನ್ ಚೇಸ್ ಮತ್ತು ವೇಗಿ ಅಲ್ಜಾರಿ ಜೋಸೆಫ್ ತಲಾ ಎರಡು ವಿಕೆಟ್ ಕಬಳಿಸಿ ಭಾರತ ಒಂದು ಹಂತದಲ್ಲಿ 126ಕ್ಕೆ 5 ವಿಕೆಟ್ ಕಳೆದುಕೊಂಡಿತ್ತು. ಅಶ್ವಿನ್ 75ರನ್ ಮತ್ತು ಸಹಾ 46 ರನ್‌ಗಳೊಂದಿಗೆ ಎರಡನೇ ದಿನದಾಟ ಆರಂಭಿಸಲಿದ್ದಾರೆ. ಅಶ್ವಿನ್ ಮತ್ತು ಸಹಾ ಜತೆಯಾಟ ಫೈನಲ್ ಸೆಷನ್‌ವರೆಗೆ ವಿಸ್ತರಿಸಿದಾಗ ವೆಸ್ಟ್ ಇಂಡೀಸ್ ಬೌಲರುಗಳು ಹತಾಶರಾದರು. ಅವರು ತೆಗೆದುಕೊಂಡ ಎರಡನೇ ಹೊಸ ಚೆಂಡಿನಿಂದ 9 ಓವರುಗಳಲ್ಲಿ 46 ರನ್‌ಗಳನ್ನು ಭಾರತ ಗಳಿಸಿತು.
ಸ್ಕೋರು ವಿವರ
ಭಾರತ ಮೊದಲ ಇನ್ನಿಂಗ್ಸ್ 234ಕ್ಕೆ 5 ವಿಕೆಟ್
ಲೋಕೇಶ್ ರಾಹುಲ್ 50 , ವಿರಾಟ್ ಕೊಹ್ಲಿ 3 ರನ್, ಅಜಿಂಕ್ಯಾ ರಹಾನೆ 35 ರನ್, ರವಿಚಂದ್ರನ್ ಅಶ್ವಿನ್ 75 ರನ್ ಬ್ಯಾಟಿಂಗ್ ಮತ್ತು ವೃದ್ಧಿಮಾನ್ ಸಹಾ 46 ಬ್ಯಾಟಿಂಗ್
9-1 (ಶಿಖರ್ ಧವನ್, 2.3), 19-2 (ವಿರಾಟ್ ಕೊಹ್ಲಿ, 5.3), 77-3 (ಲೋಕೇಶ್ ರಾಹುಲ್, 19.3), 87-4 (ರೋಹಿತ್ ಶರ್ಮಾ, 25.6), 126-5 (ಅಜಿಂಕ್ಯ ರಹಾನೆ, 49.3)