ರೋಹಿತ್ ಶರ್ಮಾ ಬೆನ್ನಲ್ಲೇ ಟೆಸ್ಟ್‌ಗೆ ಗುಡ್‌ಬೈ ಹೇಳಲು ಬಯಸಿದ್ದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ

Sampriya

ಶನಿವಾರ, 10 ಮೇ 2025 (12:16 IST)
Photo Courtesy X
ನವದೆಹಲಿ: ಹಿಟ್‌ಮ್ಯಾನ್‌ ರೋಹಿತ್ ಶರ್ಮಾ ಬೆನ್ನಲ್ಲೇ ಸ್ಟಾರ್‌ ಬ್ಯಾಟರ್‌ ಅವರು ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲು ಬಯಸಿರುವುದಾಗಿ ಬಿಸಿಸಿಐ ಮೂಲಗಳು ಮಾಹಿತಿ ನೀಡಿದೆ.

ಜೂನ್‌ 20ರಿಂದ ಆರಂಭವಾಗಲಿರುವ ಇಂಗ್ಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಗೆ ತಾನು ಅಲಭ್ಯರಾಗುವುದಾಗಿ ವಿರಾಟ್‌ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.  36 ವರ್ಷದ ವಿರಾಟ್ ಕೊಹ್ಲಿ 123 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 30 ಶತಕಗಳೊಂದಿಗೆ 9,230 ರನ್ ಗಳಿಸಿದ್ದಾರೆ.

ಆದರೆ ಬಿಸಿಸಿಐ ಹಿರಿಯ ಅಧಿಕಾರಿಗಳು ವಿರಾಟ್‌ ಕೊಹ್ಲಿಗೆ ತನ್ನ ನಿರ್ಧಾರವನ್ನು ಮರುಪರಿಶೀಲಿಸಲು ತಿಳಿಸಿದ್ದಾರೆ ಎನ್ನಲಾಗಿದೆ. ರೋಹಿತ್‌ ಶರ್ಮಾ ಅವರು ಕೆಲವೇ ದಿನಗಳ ಹಿಂದೆ ಟೆಸ್ಟ್‌ ಮಾದರಿಗೆ ವಿದಾಯ ಹೇಳಿದ್ದರು. ಟಿ20 ವಿಶ್ವಕಪ್‌ ಗೆದ್ದ ಬೆಲ್ಲೇ ವಿರಾಟ್‌ ಮತ್ತು ರೋಹಿತ್‌ ಶರ್ಮಾ ಅವರು ಒಂದೇ ಸಮಯದಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ್ದರು.

ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ತಂಡವನ್ನು ಅಂತಿಮಗೊಳಿಸಲು ಆಯ್ಕೆ ಸಮಿತಿ ಸಭೆ ನಡೆಸಲಿರುವ ಸ್ವಲ್ಪ ದಿನ ಮುಂಚಿತವಾಗಿ ಈ ಮಹತ್ವದ ಬೆಳವಣಿಗೆ ಸಂಭವಿಸಿದೆ. ಟೆಸ್ಟ್ ಪ್ರವಾಸಕ್ಕಾಗಿ ತಂಡವನ್ನು ಮೇ ಕೊನೆಯ ವಾರದ ಮೊದಲು ಆಯ್ಕೆ ಮಾಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಹಿಂದೆ ತಿಳಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ