Virat Kohli: ಭಾರತ ಪಾಕಿಸ್ತಾನ ಬಗ್ಗೆ ಕೊನೆಗೂ ತುಟಿಬಿಚ್ಚಿದ ವಿರಾಟ್ ಕೊಹ್ಲಿ ಹೇಳಿದ್ದೇನು

Krishnaveni K

ಶುಕ್ರವಾರ, 9 ಮೇ 2025 (14:28 IST)
ಮುಂಬೈ: ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ವಾತಾವರಣವಿರುವಾಗ ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕೊನೆಗೂ ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂಧೂರ್ ನಡೆಸಿದಾಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಂತಹ ಹಿರಿಯ ಕ್ರಿಕೆಟಿಗರು ಯಾವುದೇ ಪೋಸ್ಟ್ ಮಾಡಿರಲಿಲ್ಲ. ಇದರ ಬಗ್ಗೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಮಾಡಿದ್ದೂ ಇದೆ.

ಆದರೆ ಈಗ ಕೊನೆಗೂ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಒಂದೇ ಸಮಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರತೀಯ ಸೇನೆ ಬೆಂಬಲಿಸಿ ಪೋಸ್ಟ್ ಮಾಡಿದ್ದಾರೆ. 

‘ನಾವು ನಮ್ಮ ದೇಶ ರಕ್ಷಿಸುತ್ತಿರುವ ಸೇನೆಯ ಜೊತೆಗೆ ದೃಢವಾಗಿ ನಿಂತಿದ್ದೇವೆ. ಈ ಹೀರೋಗಳ ಸೇವೆಗೆ ನಾವು ಎಂದೆಂದಿಗೂ ಋಣಿಯಾಗಿದ್ದೇವೆ. ಅವರ ಧೈರ್ಯ, ಸಾಹಸಕ್ಕೆ ದೇಶ ರಕ್ಷಣೆಗಾಗಿ ಮಾಡುತ್ತಿರುವ ತ್ಯಾಗಕ್ಕೆ ನಾವು ಎಂದಿಗೂ ಕೃತಜ್ಞರಾಗಿರುತ್ತೇವೆ. ಜೈ ಹಿಂದ್’ ಎಂದು ಕೊಹ್ಲಿ ಪೋಸ್ಟ್ ಮಾಡಿದ್ದಾರೆ. ಅನುಷ್ಕಾ ಶರ್ಮಾ ಕೂಡಾ ಇದೇ ಅರ್ಥ ಬರುವ ಇನ್ನೊಂದು ಪೋಸ್ಟ್ ಮಾಡಿದ್ದು ಯೋಧರ ಕುಟುಂಬದವರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಜೊತೆಗೆ ಎಲ್ಲರೂ ಸೇಫ್ ಆಗಿರಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ