ಅಂಡರ್ 12 ಕ್ರಿಕೆಟ್ ತಂಡಕ್ಕೆ 4 ವರ್ಷದ ಬಾಲಪ್ರತಿಭೆ ಆಯ್ಕೆ

ಶನಿವಾರ, 23 ಜುಲೈ 2016 (11:33 IST)
ಅನೇಕ ಮಂದಿ ನಾಲ್ಕು ವರ್ಷ ಪ್ರಾಯದ ಮಕ್ಕಳು ತಮ್ಮ ಪೋಷಕರ ಜತೆ ಆಟವಾಡುತ್ತಾ, ಗೊಂಬೆಗಳನ್ನು ಸಂಗ್ರಹಿಸುತ್ತಾ ಕಾಲ ಕಳೆದರೆ, ದೆಹಲಿಯೊಂದು ಪ್ರತಿಭಾಶಾಲಿ ಮಗುವೊಂದು ಕ್ರಿಕೆಟ್ ಆಟಗಾರನಾಗಿ ಸುದ್ದಿ ಮಾಡಿದೆ. ಕೇವಲ  4 ವರ್ಷ ಪ್ರಾಯದ ಮಗು ಶಯಾನ್ ಜಮಾಲ್ ಅಂಡರ್ 12 ತಂಡದಲ್ಲಿ ಅವರ ಶಾಲೆಯನ್ನು ಪ್ರತಿನಿಧಿಸುವ ಬ್ಯಾಟ್ಸ್‌ಮನ್ ಆಗಿ ಆಯ್ಕೆಯಾಗಿದ್ದಾನೆ.

ತಂದೆ ಕೂಡ ಕ್ಲಬ್ ಮಟ್ಟದ ಕ್ರಿಕೆಟರ್ ಆಗಿದ್ದು, ಟಿವಿಯಲ್ಲಿ ಕ್ರಿಕೆಟ್ ಪಂದ್ಯ ಪ್ರಸಾರವಾಗುತ್ತಿದ್ದಂತೆ ಶಯಾನ್ ಅದರ ವೀಕ್ಷಣೆಯಲ್ಲಿ ತಲ್ಲೀನನಾಗುತ್ತಿದ್ದ ಎಂದು ತಂದೆ ಹೇಳಿದ್ದಾರೆ. ಅವನ ವಯಸ್ಸಿನ ಬಹುತೇಕ ಮಕ್ಕಳು ಟಿವಿಯಲ್ಲಿ ಕಾರ್ಟೂನ್ ನೋಡುವುದರಲ್ಲಿ ಮಗ್ನವಾಗಿದ್ದರೆ, ಶಯಾನ್ ಕ್ರಿಕೆಟ್ ವೀಕ್ಷಣೆಯಲ್ಲಿ ಕಾಲ ಕಳೆಯುತ್ತಿದ್ದ. ಮಗು ಪ್ರಸಕ್ತ ಹೆಸರಾಂತ ಕ್ರಿಕೆಟ್ ಕೋಚ್ ಉತ್ತಮ್ ಭಟ್ಟಾಚಾರ್ಯ ಅವರಿಂದ ಕೋಚಿಂಗ್ ಪಡೆಯುತ್ತಿದೆ. ಉತ್ತಮ್ ಮಗುವನ್ನು ಕ್ರಿಕೆಟ್ ಅಕಾಡೆಮಿಗೆ ಸೇರಿಸಿಕೊಂಡು ನಿಯಮಿತವಾಗಿ ಮಗುವಿಗೆ ತರಬೇತಿ ನೀಡುತ್ತಿದ್ದಾರೆ.

ಶಯಾನ್ ಬಾಲ ಪ್ರತಿಭೆಯಾಗಿದ್ದು, ಅಷ್ಟು ಚಿಕ್ಕವಯಸ್ಸಿನಲ್ಲಿ ಕ್ರಿಕೆಟಿಂಗ್ ಜ್ಞಾನದೊಂದಿಗೆ ಬ್ಯಾಟಿಂಗ್ ಮಾಡುತ್ತಾನೆ. ಕ್ರಿಕೆಟ್ ಗ್ರೇಟ್ ಸಚಿನ್ ತೆಂಡೂಲ್ಕರ್‌ಗೆ ಕೂಡ ನಾಲ್ಕು ವರ್ಷ ವಯಸ್ಸಿನಲ್ಲಿ ಕ್ರಿಕೆಟ್ ತಿಳಿವಳಿಕೆ ಇರಲಿಲ್ಲ ಎಂದು ಉತ್ತಮ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ