ಡಬ್ಲ್ಯುಟಿಸಿ ಫೈನಲ್ ಗೆಲ್ಲಲು ದ ಆಫ್ರಿಕಾಗೆ ಕಠಿಣ ಗುರಿ ನೀಡಿದ ಆಸ್ಟ್ರೇಲಿಯಾ

Krishnaveni K

ಶುಕ್ರವಾರ, 13 ಜೂನ್ 2025 (17:25 IST)
ಲಂಡನ್: ಡಬ್ಲ್ಯುಟಿಸಿ ಫೈನಲ್ ಪಂದ್ಯ ಗೆದ್ದು ಮೊದಲ ಬಾರಿಗೆ ಐಸಿಸಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ತವಕದಲ್ಲಿರುವ ದ ಆಫ್ರಿಕಾಗೆ ಆಸ್ಟ್ರೇಲಿಯಾ ಗೆಲ್ಲಲು 282 ರನ್ ಗಳ ಕಠಿಣ ಗುರಿ ನೀಡಿದೆ.

ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 212 ರನ್ ಗಳಿಗೆ ಆಲೌಟ್ ಆಗಿತ್ತು. ಆಗ ದ ಆಫ್ರಿಕಾವೇ ಮೇಲುಗೈ ಸಾಧಿಸಿತು ಎಂದು ಎಲ್ಲರೂ ಅಂದುಕೊಂಡಿದ್ದರು.

ಆದರೆ ಆಸ್ಟ್ರೇಲಿಯಾ ಬೌಲಿಂಗ್ ಗೆ ತತ್ತರಿಸಿದ ಆಫ್ರಿಕಾ ಕೇವಲ 138 ರನ್ ಗಳಿಗೆ ಆಲೌಟ್ ಆಗುವ ಮೂಲಕ ಬೃಹತ್ ಹಿನ್ನಡೆ ಅನುಭವಿಸಿತು. ಇದೀಗ ದ್ವಿತೀಯ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ಮಿಚೆಲ್ ಸ್ಟಾರ್ಕ್ ಔಟಾಗದೇ 58 ರನ್ ಗಳಿಸಿದ್ದರಿಂದ 207 ರನ್ ಗಳಿಸಲು ಶಕ್ತವಾಗಿದೆ. ಮೊದಲ ಇನಿಂಗ್ಸ್ ಮುನ್ನಡೆಯೂ ಸೇರಿ ಆಸ್ಟ್ರೇಲಿಯಾ ಒಟ್ಟು 281 ರನ್ ಕಲೆ ಹಾಕಿದಂತಾಗಿದೆ.

ಇದರಿಂದಾಗಿ ಈಗ ಆಫ್ರಿಕಾಗೆ ಬೌಲಿಂಗ್ ಗೆ ಅದ್ಭುತವಾಗಿ ಸಹಕಾರಿಯಾಗುತ್ತಿರುವ ಪಿಚ್ ನಲ್ಲಿ 282 ರನ್ ಗಳ ಗುರಿ ಸಾಧಿಸುವುದು ಕಠಿಣ ಸವಾಲಾಗಿದೆ. ಆದರೆ ಆಫ್ರಿಕಾ ಈ ಹಿಂದೆ ಮೂರು ಬಾರಿ ಆಸ್ಟ್ರೇಲಿಯಾ  ವಿರುದ್ಧ 250 ಪ್ಲಸ್ ರನ್ ಯಶಸ್ವಿಯಾಗಿ ಬೆನ್ನಟ್ಟಿದೆ. ಹೀಗಾಗಿ ಈ ಬಾರಿಯೂ ಟೆಂಬಾ ಬವುಮಾ ತಂಡ ಆತ್ಮವಿಶ್ವಾಸದಿಂದಲೇ ದ್ವಿತೀಯ ಇನಿಂಗ್ಸ್ ಆರಂಭಿಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ