ಮೊಹಮ್ಮದ್ ಶಮಿಗೆ ಮದುವೆ ಆಫರ್ ಕೊಟ್ಟ ನಟಿ ಪಾಯಲ್ ಘೋಷ್

ಬುಧವಾರ, 8 ನವೆಂಬರ್ 2023 (16:34 IST)
ಮುಂಬೈ: ವಿಶ್ವಕಪ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಟ್ರಂಪ್ ಕಾರ್ಡ್ ಬೌಲರ್ ಆಗಿರುವ ವೇಗಿ ಮೊಹಮ್ಮದ್ ಶಮಿಗೆ ನಟಿಯೊಬ್ಬರು ಮದುವೆ ಪ್ರಸ್ತಾಪವಿಟ್ಟಿದ್ದಾರೆ.

ಬಾಲಿವುಡ್ ನಟಿ ಪಾಯಲ್ ಘೋಷ್ ಟೀಂ ಇಂಡಿಯಾ ಕ್ರಿಕೆಟಿಗನನ್ನು ಮದುವೆಯಾಗಲು ಸಿದ್ಧ ಎಂದಿದ್ದು, ನೇರವಾಗಿ ಟ್ವೀಟ್ ಮೂಲಕ ಶಮಿಗೇ ಮದುವೆ ಪ್ರಸ್ತಾಪವಿಟ್ಟಿದ್ದಾರೆ. ಜೊತೆಗೆ ಷರತ್ತೊಂದನ್ನೂ ವಿಧಿಸಿದ್ದಾರೆ.

ನಿಮ್ಮ ಇಂಗ್ಲಿಷ್ ಸುಧಾರಿಸಿದರೆ ನಾನು ನಿಮ್ಮನ್ನು ಮದುವೆಯಾಗಲು ಸಿದ್ಧ. ನೀವು ಸೆಮಿಫೈನಲ್ ನಲ್ಲಿ ಅತ್ಯದ್ಭುತ  ಪ್ರದರ್ಶನ ನೀಡಲು ನನ್ನಿಂದ ಯಾವ ನೈತಿಕ ಬೆಂಬಲ ಬೇಕು? ಎಂದು ಶಮಿಗೆ ಆಫರ್ ಕೊಟ್ಟಿದ್ದಾರೆ. ಈ ಟ್ವೀಟ್ ಈಗ ಭಾರೀ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ