ಏಕದಿನ ವಿಶ್ವಕಪ್: ಆಸೀಸ್ ವಿರುದ್ಧ ಅಫ್ಘಾನಿಸ್ತಾನ ಕೆಚ್ಚೆದೆಯ ಬ್ಯಾಟಿಂಗ್

ಮಂಗಳವಾರ, 7 ನವೆಂಬರ್ 2023 (17:48 IST)
ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕೂಟದಲ್ಲಿ ಅಫ್ಘಾನಿಸ್ತಾನ ಮತ್ತೊಂದು ಬ್ಲಾಕ್ ಬ್ಲಸ್ಟರ್ ಪ್ರದರ್ಶನ ನೀಡಿದೆ. ದೈತ್ಯ ಆಸ್ಟ್ರೇಲಿಯಾ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿರುವ ಅಫ್ಘಾನಿಸ್ತಾನ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿದೆ.

ವಿಶೇಷವೆಂದರೆ ಅಫ್ಘಾನಿಸ್ತಾನ ಪರ ಇಬ್ರಾಹಿಂದ ಜರ್ದಾನ್ ಭರ್ಜರಿ ಬ್ಯಾಟಿಂಗ್ ಮಾಡಿದ್ದು 143 ಎಸೆತಗಳಿಂದ 129 ರನ್ ಗಳಿಸಿದ್ದಾರೆ. ಕೊನೆಯಲ್ಲಿ ಅನುಭವಿ ರಶೀದ್ ಖಾನ್ ಕೇವಲ 18 ಎಸೆತಗಳಿಂದ 35 ರನ್ ಚಚ್ಚಿದರು. ಚಾಂಪಿಯನ್ಸ್ ಟ್ರೋಫಿ 2025 ಕ್ಕೆ ಅರ್ಹತೆ ಪಡೆದು ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ಅಫ್ಘಾನಿಸ್ತಾನದಿಂದ ಇಂತಹದ್ದೊಂದು ಭರ್ಜರಿ ಪ್ರದರ್ಶನ ಬಂದಿರುವುದು ವಿಶೇಷ.

ಮುಂಬೈ ಪಿಚ್ ನಲ್ಲಿ ಎರಡನೇ ಇನಿಂಗ್ಸ್ ನಲ್ಲಿ ಇಷ್ಟು ದೊಡ್ಡ ಮೊತ್ತ ಚೇಸ್ ಮಾಡುವುದು ಸುಲಭದ ಮಾತಲ್ಲ. ಹೀಗಾಗಿ ಇಂದು ಅಫ್ಘಾನಿಸ್ತಾನವೇ ಮೇಲುಗೈ ಸಾಧಿಸಿದರೂ ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ