ಕೊಹ್ಲಿ ದಾಖಲೆ ಮುರಿದ ಆಫ್ಘನ್ ಆಟಗಾರ..! ಆದರೂ ಕೊಹ್ಲಿಯೇ ಗ್ರೇಟ್

ಸೋಮವಾರ, 13 ಮಾರ್ಚ್ 2017 (11:57 IST)

ಕ್ರಿಕೆಟ್ ಎನ್ನುವುದು ಹಾಗೆ. ಇವತ್ತಿದ್ದ ದಾಖಲೆಯನ್ನ ಮುಂದೊಂದು ದಿನ ಮತ್ಯಾರೋ ಮುರಿದು ಹೊಸ ದಾಖಲೆ ಬರೆಯುತ್ತಾರೆ. ವಿಶ್ವ ಕ್ರಿಕೆಟ್`ನಲ್ಲಿ ಹಲವು ದಾಖಲೆಗಳನ್ನ ಮೆಟ್ಟಿ ನಿಂತು ಹೊಸ ದಾಖಲೆ ಬರೆದಿರುವ ಟೀಮ್ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ದಾಖಲೆಯನ್ನೇ ಮುರಿದಿದ್ದಾನೆ ಆಫ್ಘಾನಿಸ್ತಾನದ ಆಟಗಾರ.


ಟಿ-20 ಪಂದ್ಯಗಳಲ್ಲಿ ಇದುವರೆಗೆ ಕೊಹ್ಲಿ 1709 ರನ್ ಗಳಿಸಿದ್ದು, ಆಫ್ಘನ್ ಆಟಗಾರ ಮೊಹಮ್ಮದ್ ಶಹಜಾದ್ 1779 ರನ್, ಅಂದರೆ ಕೊಹ್ಲಿಗಿಂತಲು 70 ರನ್ ಹೆಚ್ಚು ದಾಖಲಿಸುವ ಮೂಲಕ ಟಿ-20 ಕ್ರಿಕೆಟ್`ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ 4ನೇ ಸ್ಥಾನಕ್ಕೆ ಏರಿದ್ದಾರೆ. ಕೊಹ್ಲಿ 5ನೇ ಸ್ಥಾನಕ್ಕೆ ಕುಸಿದ್ದಾರೆ.ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ 123 ರನ್ ಸಿಡಿಸಿದ ಮೊಹಮ್ಮದ್ ಈ ದಾಖಲೆ ಬರೆದಿದ್ದಾರೆ.

ಕೊಹ್ಲಿಯೇ ಗ್ರೇಟ್: ಮೊಹಮ್ಮದ್ ಶಹಜ಻ದ್ ಸದ್ಯ ಕೊಹ್ಲಿಗಿಂತ ಹೆಚ್ಚು ರನ್ ಗಳಿಸಿರಬಹುದು. ಶಹಜಾದ್ ಇದುವರೆಗೆ 58 ಟಿ-20 ಪಂದ್ಯಗಳನ್ನಾಡಿದ್ದಾರೆ. ಕೊಹ್ಲಿ ಆಡಿರುವುದು ಕೇವಲ 48 ಮಾತ್ರ. ಕೊಹ್ಲಿಗಿಂತ 10 ಪಂದ್ಯಗಳನ್ನ ಹೆಚ್ಚು ಶಹಜಾದ್ ಆಡಿದ್ದಾರೆ. ಹೀಗಾಗಿ, ಕಡಿಮೆ ಪಂದ್ಯಗಳಲ್ಲಿ ಕೊಹ್ಲಿ ಹೆಚ್ಚು ರನ್ ಗಳಿಸಿದ್ದು ಮೊಹಮ್ಮದ್ ಶಹಜಾದ್`ಗಿಂತಲೂ ಗ್ರೇಟ್ ಎನ್ನುವುದರಲ್ಲಿ ಎರಡು ಮಾತಿಲ್ಲ.

ವೆಬ್ದುನಿಯಾವನ್ನು ಓದಿ