ವಿರಾಟ್ ಕೊಹ್ಲಿಗಾದ ಕಿಸ್ ಅನುಭವವೇ ರೋಹಿತ್ ಶರ್ಮಾಗೂ ಎದುರಾಯ್ತು!

ಮಂಗಳವಾರ, 16 ಅಕ್ಟೋಬರ್ 2018 (09:35 IST)
ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಅಭಿಮಾನಿಯೊಬ್ಬ ಮೈದಾನದಲ್ಲಿ ಕಿಸ್ ಮಾಡಲು ಬಂದ ಅನುಭವವೇ ಕ್ರಿಕೆಟಿಗ ರೋಹಿತ್ ಶರ್ಮಾಗೂ ಆಗಿದೆ.

ವಿಜಯ್ ಹಜಾರೆ ಟ್ರೋಫಿ ಆಡುತ್ತಿರುವ ರೋಹಿತ್ ಶರ್ಮಾರನ್ನು ಮೈದಾನಕ್ಕೆ ನುಗ್ಗಿ ಅಭಿಮಾನಿಯೊಬ್ಬ ಕಿಸ್ ಮಾಡಲು ಪ್ರಯತ್ನಪಟ್ಟ ಘಟನೆ ನಡೆದಿದೆ. ಮುಂಬೈ ಮತ್ತು ಬಿಹಾರ ನಡುವೆ ನಡೆದ ವಿಜಯ್ ಹಜಾರೆ ಸೆಮಿಫೈನಲ್ ನಲ್ಲಿ ಈ ಘಟನೆ ನಡೆದಿದೆ.

ಈ ಪಂದ್ಯದಲ್ಲಿ ರೋಹಿತ್ ಮುಂಬೈ ಪರ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರು. ರೋಹಿತ್ ಬ್ಯಾಟಿಂಗ್ ಮಾಡುತ್ತಿರಬೇಕಾದರೆ ಕ್ರೀಸ್ ಗೆ ಬಂದ ಅಭಿಮಾನಿ ಕಾಲಿಗೆ ಬಿದ್ದು ನಮಸ್ಕಾರ ಮಾಡಿ ನಂತರ ಕಿಸ್ ಮಾಡಲು ಪ್ರಯತ್ನ ಮಾಡಿದ್ದ. ಆದರೆ ಅಷ್ಟರಲ್ಲಿ ಭದ್ರತಾ ಸಿಬ್ಬಂದಿಗಳು ಆತನನ್ನು ಹೊರಗೆ ಕರೆದೊಯ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ