ಟೀಂ ಇಂಡಿಯಾದಿಂದ ಹೊರಬಿದ್ದ ಬೆನ್ನಲ್ಲೇ ರೆಹಾನೆ, ಪೂಜಾರಗೆ ಬಿಗ್ ಶಾಕ್

ಗುರುವಾರ, 3 ಮಾರ್ಚ್ 2022 (10:30 IST)
ಮುಂಬೈ: ಕಳಪೆ ಫಾರ್ಮ್ ನಿಂದಾಗಿ ಟೀಂ ಇಂಡಿಯಾದಿಂದ ಹೊರಬಿದ್ದ ಬೆನ್ನಲ್ಲೇ ಚೇತೇಶ್ವರ ಪೂಜಾರ, ಅಜಿಂಕ್ಯಾ ರೆಹಾನೆಗೆ ಮತ್ತೊಂದು ಶಾಕ್ ಎದುರಾಗಿದೆ.

ಬಿಸಿಸಿಐ ಟೀಂ ಇಂಡಿಯಾ ಕ್ರಿಕೆಟಿಗರ ವೇತನ ಗುತ್ತಿಗೆ ನವೀಕರಿಸಿದ್ದು, ರೆಹಾನೆ, ಪೂಜಾರಗೆ ಎ ದರ್ಜೆಯಿಂದ ಬಿ ದರ್ಜೆಗೆ ಹಿಂಬಡ್ತಿ ನೀಡಲಾಗಿದೆ. ಅದೇ ರೀತಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೂ ಹಿಂಬಡ್ತಿ ನೀಡಲಾಗಿದ್ದು ಎ ದರ್ಜೆಯಿಂದ ಸಿ ದರ್ಜೆಗೆ ಹಿಂಬಡ್ತಿ ನೀಡಲಾಗಿದೆ.

ಎ ಪ್ಲಸ್ ದರ್ಜೆಗೆ ವಾರ್ಷಿಕ 7 ಕೋಟಿ ರೂ., ಎ ದರ್ಜೆಗೆ 5 ಕೋಟಿ ರೂ., ಬಿ ದರ್ಜೆಗೆ 3 ಕೋಟಿ ರೂ., ಸಿ ದರ್ಜೆಯ ಕ್ಯಾಟಗರಿಗೆ 1 ಕೋಟಿ ರೂ. ವೇತನ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ